ಜಿನೀವಾ: ಸಾಂಪ್ರದಾಯಿಕ ಔಷಧದ ಪುರಾವೆಗಳನ್ನು ಬಲಪಡಿಸುವ ಕ್ರಾಸ್-ಸೆಕ್ಟೋರಲ್ ಕಾರ್ಯಕ್ರಮಕ್ಕೆ ಭಾರತವು 10 ವರ್ಷಗಳಲ್ಲಿ ಸುಮಾರು ₹711 ಕೋಟಿ ನೀಡಲು ವಾಗ್ದಾನ ಮಾಡಿದೆ ಎಂದು ಡಬ್ಲ್ಯೂಎಚ್‌ಒ ಗುರುವಾರ ಹೇಳಿಕೆಯಲ್ಲಿ ತಿಳಿಸಿದೆ.
ಬುಧವಾರ ಇಲ್ಲಿ ನಡೆದ ಸಹಿ ಹಾಕುವ ಸಮಾರಂಭದಲ್ಲಿ ಇದು ಸ್ಪಷ್ಟವಾಯಿತು. ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರು ಭಾರತದ ಬದ್ಧತೆಗೆ ಧನ್ಯವಾದ ಸಲ್ಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.