ADVERTISEMENT

ಭಾರತಕ್ಕೆ ಅಮೆರಿಕ ನಾಯಕತ್ವದ ಮೇಲೆ ನಂಬಿಕೆ ಇಲ್ಲ: ನಿಕ್ಕಿ ಹ್ಯಾಲೆ

ಪಿಟಿಐ
Published 8 ಫೆಬ್ರುವರಿ 2024, 2:07 IST
Last Updated 8 ಫೆಬ್ರುವರಿ 2024, 2:07 IST
ನಿಕ್ಕಿ ಹ್ಯಾಲೆ
ನಿಕ್ಕಿ ಹ್ಯಾಲೆ   

ವಾಷಿಂಗ್ಟನ್‌: ಭಾರತವು ಅಮೆರಿಕದೊಂದಿಗೆ ಸಹಯೋಗ ಬಯಸುತ್ತದೆ. ಆದರೆ ಅಮೆರಿಕ ನಾಯಕತ್ವ ವಹಿಸುವುದು ಭಾರತಕ್ಕೆ ಬೇಡ ಎಂದು ರಿಪಬ್ಲಿಕನ್‌ನ ಆಧ್ಯಕ್ಷೀಯ ಸ್ಪರ್ಧೆಯ ಆಕಾಂಕ್ಷಿ, ಭಾರತ ಮೂಲದ ನಿಕ್ಕಿ ಹ್ಯಾಲೆ ಹೇಳಿದ್ದಾರೆ.

ಈಗಿನ ಜಾಗತಿಕ ಸನ್ನಿವೇಶದಲ್ಲಿ ಭಾರತವು ರಷ್ಯಾ ಪರ ನಿಲ್ಲುವ ಮೂಲಕ ಜಾಣ ಆಟವಾಡಿದೆ ಎಂದು ಅವರು ನುಡಿದಿದ್ದಾರೆ.

ಫಾಕ್ಸ್ ಬ್ಯುಸಿನೆಸ್‌ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಭಾರತವು ಅಮೆರಿಕವನ್ನು ದುರ್ಬಲವಾಗಿ ನೋಡುತ್ತದೆ ಎಂದಿದ್ದಾರೆ.

ADVERTISEMENT

‘ನಾನು ಭಾರತದ ಜೊತೆ ಕೆಲಸ ಮಾಡಿದ್ದೇನೆ. ನರೇಂದ್ರ ಮೋದಿ ಜೊತೆಗೂ ಮಾತನಾಡಿದ್ದೇನೆ. ಅವರು ನಮ್ಮೊಂದಿಗೆ ಸಹಯೋಗ ಬಯಸುತ್ತಾರೆ. ರಷ್ಯಾದೊಂದಿಗೆ ಪಾಲುದಾರಿಕೆ ಹೊಂದಲು ಅವರು ಬಯಸುವುದಿಲ್ಲ’ ಎಂದು ಹೇಳಿದ್ದಾರೆ.

‘ಸಮಸ್ಯೆ ಏನೆಂದರೆ ಭಾರತಕ್ಕೆ ನಮ್ಮ ಮೇಲೆ, ನಮ್ಮ ನಾಯಕತ್ವದ ಮೇಲೆ ನಂಬಿಕೆ ಇಲ್ಲ. ನಮ್ಮನ್ನು ದುರ್ಬಲರಾಗಿ ಅವರು ಕಾಣುತ್ತಿದ್ದಾರೆ. ಭಾರತ ಯಾವತ್ತೂ ಜಾಣ ಆಟವಾಡುತ್ತದೆ. ಹೀಗಾಗಿ ರಷ್ಯಾದ ಜತೆ ನಿಂತಿದೆ. ಯಾಕೆಂದರೆ ಅವರಿಗೆ ಭಾರಿ ಸೇನಾ ಸಲಕರಣೆಗಳು ಲಭಿಸುತ್ತವೆ’ ಎಂದು ನಿಕ್ಕಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.