ADVERTISEMENT

ಭಾರತದಿಂದ ನೇಪಾಳಕ್ಕೆ ಪರಿಹಾರ ಸಾಮಗ್ರಿ ಹಸ್ತಾಂತರ

ಪಿಟಿಐ
Published 8 ಅಕ್ಟೋಬರ್ 2024, 13:49 IST
Last Updated 8 ಅಕ್ಟೋಬರ್ 2024, 13:49 IST
   

ಕಠ್ಮಂಡು: ಪ್ರವಾಹದಿಂದ ತತ್ತರಿಸಿರುವ ನೇಪಾಳಕ್ಕೆ ಭಾರತದಿಂದ ಮೊದಲ ಹಂತದ ಪರಿಹಾರ ಸಾಮಾಗ್ರಿಗಳನ್ನು ಸೋಮವಾರ ಹಸ್ತಾಂತರಿಸಲಾಗಿದೆ.

‘ಸ್ಲೀಪಿಂಗ್‌ ಬ್ಯಾಗ್‌, ಬ್ಲಾಂಕೆಟ್‌ ಮತ್ತು ಟಾರ್ಪಲಿನ್ ಶೀಟ್‌ಗಳು ಸೇರಿದಂತೆ ವಿವಿಧ ವಸ್ತುಗಳನ್ನು ಭಾರತೀಯ ರಾಯಭಾರಿ ಕಚೇರಿಯು ನೇಪಾಳಕ್ಕೆ ಹಸ್ತಾಂತರಿಸಿತು’ ಎಂದು ಭಾರತದ ರಾಯಭಾರ ಕಚೇರಿಯ ಅಧಿಕೃತ ಪ್ರಕಟಣೆ ತಿಳಿಸಿದೆ.

‘ಭಾರತವು ಅಗತ್ಯ ಸ್ವಚ್ಛತಾ ಸಾಮಗ್ರಿ ಮತ್ತು ಔಷಧಗಳ ಸಂಗ್ರಹಣೆ ಮಾಡುತ್ತಿದ್ದು, ಶೀಘ್ರದಲ್ಲೇ ನೇಪಾಳಕ್ಕೆ ರವಾನಿಸಲಿದೆ’ ಎಂದು ಪ್ರಕಟಣೆ ತಿಳಿಸಿದೆ.   

ADVERTISEMENT

‘ಸಂಕಷ್ಟದಲ್ಲಿರುವ ನೇಪಾಳಕ್ಕೆ ನೆರೆಯ ರಾಷ್ಟ್ರಗಳ ಪೈಕಿ ಭಾರತವೇ ಮೊದಲು ನೆರವು ನೀಡಿದ್ದು, ಪರಿಸ್ಥಿತಿ ಸುಧಾರಿಸುವವರೆಗೆ ಎಲ್ಲ ರೀತಿಯ ಸಹಕಾರ ನೀಡಲು ಬದ್ಧ’ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.