ADVERTISEMENT

ಭಾರತವು ಇಂಧನ ಬಿಕ್ಕಟ್ಟನ್ನು ಪ್ರಬುದ್ಧವಾಗಿ ನಿಭಾಯಿಸಿದೆ: ಕೇಂದ್ರ ಸಚಿವ ಪುರಿ

ಪಿಟಿಐ
Published 7 ಅಕ್ಟೋಬರ್ 2022, 2:51 IST
Last Updated 7 ಅಕ್ಟೋಬರ್ 2022, 2:51 IST
ಹರದೀಪ್‌ ಸಿಂಗ್ ಪುರಿ
ಹರದೀಪ್‌ ಸಿಂಗ್ ಪುರಿ   

ವಾಷಿಂಗ್ಟನ್‌:ಭಾರತವು ಸದ್ಯ ಎದುರಾಗಿರುವ ಇಂಧನ ಬಿಕ್ಕಟ್ಟನ್ನು ಜವಾಬ್ದಾರಿಯುತವಾಗಿ ಮತ್ತು ಪ್ರಬುದ್ಧ ರೀತಿಯಲ್ಲಿ ನಿಭಾಯಿಸಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ದೇಶದ ಯಾವುದೇ ಭಾಗದಲ್ಲಿಯೂ ಇಂಧನ ಕೊರತೆ ಉಂಟಾಗದಂತೆ ನೋಡಿಕೊಂಡಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರದೀಪ್‌ ಸಿಂಗ್ ಪುರಿಹೇಳಿದ್ದಾರೆ.

ಪುರಿ ಅವರುದ್ವಿಪಕ್ಷೀಯ ಮಾತುಕತೆ ಸಲುವಾಗಿಯುಎಸ್‌ ಇಂಧನ ಕಾರ್ಯದರ್ಶಿ ಜೆನ್ನಿಫರ್‌ ಗ್ರಾನ್‌ಹೋಮ್‌ ಅವರನ್ನು ಶುಕ್ರವಾರ ಭೇಟಿಯಾಗಲಿದ್ದಾರೆ.

ಯುಎಸ್‌ನಲ್ಲಿ ಭಾರತದರಾಯಭಾರಿಯಾಗಿರುವ ತರಂಜಿತ್‌ ಸಿಂಗ್‌ ಸಂಧು ಅವರು ಆಯೋಜಿಸಿದ್ದ ಸ್ವಾಗತ ಸಭೆಯಲ್ಲಿ ಮಾತನಾಡಿದ ಪುರಿ, 'ಇಂದು ನಾವು ಇಂಧನದ ಬಗ್ಗೆ ಮಾತನಾಡುವಾಗ ಇದ್ದಕ್ಕಿದ್ದಂತೆ ವಿಭಿನ್ನವಾದ ಆಲೋಚನೆಗಳು (ಬಿಕ್ಕಟ್ಟಿನ ವಿಚಾರಗಳು) ಮೂಡಿಬರುತ್ತದೆ. ಆದರೆ, ಅವು ಕೂಡ ಕಳೆದುಹೋಗುತ್ತವೆ. ಜವಾಬ್ದಾರಿಯುತ ಹಾಗೂ ಪ್ರಬುದ್ಧ ರೀತಿಯಲ್ಲಿ ಆಲೋಚಿಸುವ ಮೂಲಕ ಸವಾಲುಗಳನ್ನು ನಿಭಾಯಿಸಲು ಸಮರ್ಥರಾಗಿದ್ದೇವೆ' ಎಂದಿದ್ದಾರೆ.

ADVERTISEMENT

'ಭಾರಿ ಪ್ರವಾಹ ಉಂಟಾಗುತ್ತಿರುವ ಈಶಾನ್ಯ ರಾಜ್ಯಗಳೂ ಸೇರಿದಂತೆ ನಮ್ಮ ದೇಶದ ಯಾವುದೇ ಭಾಗದ ಜನರಿಗೆ ಇಂಧನ ಕೊರತೆ ಎದುರಾಗುವುದಕ್ಕೆ ನಾವು ಅವಕಾಶ ನೀಡುವುದಿಲ್ಲ. ಯಾವತ್ತೂ ಯಾವುದೇ ಕೊರತೆಯಾಗಿಲ್ಲ. ಮುಂದೆಯೂ ಹೀಗೆಯೇ ಮುನ್ನಡೆಯುವಭರವಸೆ ನಮಗಿದೆ' ಎಂದುವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.