ವಾಷಿಂಗ್ಟನ್: ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೋಭಾಲ್ ಅವರು ಮುಂದಿನ ವಾರ ಅಮೆರಿಕಕ್ಕೆ ಭೇಟಿ ನೀಡಲಿದ್ದು, ಅಮೆರಿಕ ಸರ್ಕಾರದ ಹಲವು ಉನ್ನತ ನಾಯಕರನ್ನು ಭೇಟಿಯಾಗಲಿದ್ದಾರೆ.
ಡೋಭಾಲ್ ಭೇಟಿ ಹಿನ್ನೆಲೆಯಲ್ಲಿ ಶುಕ್ರವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅಮೆರಿಕದ ರಕ್ಷಣಾ ಇಲಾಖೆ ಉಪ ವಕ್ತಾರ ವೇದಾಂತ್ ಪಟೇಲ್, ‘ಪಾಲುದಾರಿಕೆ ವಿಷಯದಲ್ಲಿ ಭಾರತ ಎಂದಿಗೂ ಉತ್ತಮ ಆಯ್ಕೆ’ ಎಂದರು.
ಭಾರತ –ಅಮೆರಿಕ ದ್ವಿಪಕ್ಷೀಯ ಚರ್ಚೆಯಲ್ಲಿ ಭದ್ರತೆ ಹಾಗೂ ತಾಂತ್ರಿಕ ಸಹಕಾರ ವಿಷಯಗಳು ಸೇರಿವೆ ಎಂದು ಹೇಳಿದರು. ಡೋಭಾಲ್ ಅವರ ಭೇಟಿ ಕುರಿತು ಉಭಯತ್ರರಿಂದ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.
ಈ ವಾರದ ಆರಂಭದಲ್ಲಿ ಅಮೆರಿಕ ಪ್ರವಾಸದಲ್ಲಿದ್ದ ಭಾರತದ ರಾಷ್ಟ್ರೀಯ ಭದ್ರತೆಯ ಉಪ ಸಲಹೆಗಾರ ವಿಕ್ರಂ ಮಿಸ್ರಿ, ಜೋ ಬೈಡನ್ ನೇತೃತ್ವದ ಸರ್ಕಾರದ ಪ್ರಮುಖರನ್ನು ಭೇಟಿಯಾಗಿ ಚರ್ಚಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.