ವಾಷಿಂಗ್ಟನ್: 'ಭಾರತವು ಹಿಂದೂ ರಾಷ್ಟ್ರೀಯವಾದ ದೇಶವಾಗುವ ಅಪಾಯದಲ್ಲಿದೆ' ಎಂದು ಡೆಮಾಕ್ರಾಟ್ ಪಕ್ಷದ ಸದಸ್ಯ ಆ್ಯಂಡಿ ಲೆವಿನ್ ಹೇಳಿದ್ದಾರೆ. 'ಮಾನವ ಹಕ್ಕುಗಳ ರಕ್ಷಣೆ ವಿಷಯದಲ್ಲಿ ಅಮೆರಿಕ ಹೆಚ್ಚಿನ ಯಶಸ್ಸನ್ನು ಸಾಧಿಸಿದೆ' ಎಂದೂ ಹೇಳಿದ್ದಾರೆ.
'ಅಜೀವಕಾಲ ಮಾನವಹಕ್ಕುಗಳ ಹೋರಾಟಗಾರ' ಎಂದು ಸ್ವತಃ ತಮ್ಮನ್ನು ಬಣ್ಣಿಸಿಕೊಳ್ಳುವ ಲೆವಿನ್ ಅವರು ಅಮೆರಿಕ ಜನಪ್ರತಿನಿಧಿಗಳ ಸಭೆಯಲ್ಲಿ ಗುರುವಾರ ತಮ್ಮ ಅಧಿಕಾರವಧಿಯ ಕೊನೆಯ ಭಾಷಣ ಮಾಡುತ್ತಿದ್ದರು.
'ಭಾರತದಂತಹ ದೇಶಗಳಲ್ಲಿ ಮಾನವ ಹಕ್ಕುಗಳ ರಕ್ಷಣೆ ಕುರಿತಂತ ನಾನು ಎಂದಿಗೂ ಧ್ವನಿ ಎತ್ತುತ್ತೇನೆ. ಭಾರತವು ಜಾತ್ಯತೀತ ಪ್ರಜಾಪ್ರಭುತ್ವ ರಾಷ್ಟ್ರವಾಗುವ ಬದಲಿಗೆ ಹಿಂದೂ ರಾಷ್ಟ್ರೀಯವಾದ ದೇಶವಾಗುವ ಅಪಾಯದಲ್ಲಿದೆ' ಎಂದು ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.