ADVERTISEMENT

ಉಕ್ರೇನ್‌ನಲ್ಲಿ ಶಾಂತಿ: ಭಾರತ ರಚನಾತ್ಮಕ ಪಾತ್ರ ವಹಿಸಲಿ: ಅಮೆರಿಕದ ಅಧಿಕಾರಿ

ಪಿಟಿಐ
Published 12 ಜುಲೈ 2024, 15:44 IST
Last Updated 12 ಜುಲೈ 2024, 15:44 IST
   

ವಾಷಿಂಗ್ಟನ್‌: ‘ಉಕ್ರೇನ್‌ನಲ್ಲಿ ಶಾಂತಿ ಸ್ಥಾಪಿಸುವಲ್ಲಿ ಭಾರತವು ರಚನಾತ್ಮಕ ಪಾತ್ರ ವಹಿಸಿದರೆ, ರಷ್ಯಾದೊಂದಿಗೆ ಮಾತುಕತೆ ನಡೆಸಲು ಸಾಧ್ಯವಾಗುತ್ತದೆ’ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಉಕ್ರೇನ್‌ನಲ್ಲಿ ಯುದ್ಧ ನಡೆಯುತ್ತಿರುವ ಸಂದರ್ಭದಲ್ಲೇ ರಷ್ಯಾ ರಾಜಧಾನಿ ಮಾಸ್ಕೋಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ ಮರುದಿನವೇ ಅಮೆರಿಕದ ಐರೋಪ್ಯ ಭದ್ರತೆ ಹಾಗೂ ರಾಜಕೀಯ ವ್ಯವಹಾರಗಳ ಕಚೇರಿಯ ನಿರ್ದೇಶಕ ಲಿಯಾಮ್‌ ವಾಸ್ಲೆ ಈ ಹೇಳಿಕೆ ನೀಡಿದ್ದಾರೆ. 

‘ರಷ್ಯಾ ಅಧ್ಯಕ್ಷ ವ್ಲಾದಿಮರ್‌ ಪುಟಿನ್‌ ಹಾಗೂ ಅವರ ದೇಶವು ಅಮೆರಿಕ, ನ್ಯಾಟೋ ಪಡೆಗಳಿಗೆ ಎಷ್ಟೊಂದು ಅಪಾಯಕಾರಿಯಾಗಿದೆ ಎಂಬುದನ್ನು ಭಾರತೀಯರು ಅರ್ಥ ಮಾಡಿಕೊಳ್ಳಬೇಕು’ ಎಂದು ತಿಳಿಸಿದ್ದಾರೆ. 

ADVERTISEMENT

‘ಇದು ಪ್ರಜಾಪ್ರಭುತ್ವದ ಶತಕೋಟಿ ಜನರ ಭದ್ರತೆಗೆ ನೇರ ಬೆದರಿಕೆಯಾಗಿದೆ’ ಎಂದು ವಾಸ್ಲೆ ಅವರು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

‘ನ್ಯಾಟೊ ಮಿತ್ರರಾಷ್ಟ್ರಗಳು ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಭಾರತೀಯರು ಕೂಡ ಅರ್ಥೈಸಿಕೊಳ್ಳಬೇಕು. ಉಕ್ರೇನ್‌ನಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಭಾರತವು ರಚನಾತ್ಮಕ ಪಾತ್ರ ವಹಿಸುವುದು ನಿಜವಾಗಿಯೂ ಮುಖ್ಯವಾಗಿದೆ’ ಎಂದು ಒತ್ತಾಯಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.