ADVERTISEMENT

ಭಾರತ –ಪಾಕಿಸ್ತಾನ ಸಂಬಂಧ ವೃದ್ಧಿಗೆ ಸಂವಾದ

ಪಿಟಿಐ
Published 13 ಜುಲೈ 2019, 20:00 IST
Last Updated 13 ಜುಲೈ 2019, 20:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇಸ್ಲಾಮಾಬಾದ್: ಭಾರತ –ಪಾಕಿಸ್ತಾನ ನಡುವೆ ಸಂಬಂಧ ವೃದ್ಧಿಸುವ ನಿಟ್ಟಿನಲ್ಲಿ ಎರಡೂ ದೇಶಗಳಸಾಮಾಜಿಕ ಕಾರ್ಯಕರ್ತರು ಎರಡು ದಿನಗಳ ಸಂವಾದದಲ್ಲಿ ಭಾಗವಹಿಸಿ ವಿಚಾರ, ವಿನಿಮಯ ಮಾಡಿಕೊಂಡಿದ್ದಾರೆ.

ಪುಲ್ವಾಮಾದಲ್ಲಿ ಉಗ್ರರ ದಾಳಿಯ ನಂತರ ಉಭಯ ದೇಶಗಳ ಸಂಬಂಧ ಹದಗೆಟ್ಟಿತ್ತು. ಆ ಬಳಿಕ ನೆರೆ ದೇಶಗಳ ನಡುವೆ ಸಂಬಂಧ ಸುಧಾರಿಸುವ ನಿಟ್ಟಿನಲ್ಲಿ ನಡೆದ ಮೊದಲ ಪ್ರಯತ್ನ ಇದು ಎನ್ನಲಾಗಿದೆ. ಇಸ್ಲಾಮಾಬಾದ್‌ನ ಪ್ರಾದೇಶಿಕ ಶಾಂತಿ ಸಂಸ್ಥೆ ಈ ಸಂವಾದ ಆಯೋಜಿಸಿತ್ತು. ಭಾರತದ ಆರು ಪ್ರತಿನಿಧಿಗಳು ಭಾಗವಹಿಸಿದ್ದರು.

ಭದ್ರತೆ, ವ್ಯಾಪಾರ ಮತ್ತು ಸೇರಿದಂತೆ ವಿವಿಧ ವಿಚಾರಗಳ ಕುರಿತು ಚರ್ಚೆಯಾಯಿತು ಎಂದು ಆಯೋಜಕರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.