ಇಸ್ಲಾಮಾಬಾದ್: ದ್ವಿಪಕ್ಷೀಯ ಒಪ್ಪಂದದ ಅನ್ವಯ ಪಾಕಿಸ್ತಾನ ಬುಧವಾರ ಅಣು ಸ್ಥಾವರಗಳ ವಿವರಗಳ ಮಾಹಿತಿಯನ್ನು ಭಾರತದ ಜತೆ ಹಂಚಿಕೊಂಡಿದೆ.
ಸ್ಥಾವರಗಳ ಪಟ್ಟಿಯನ್ನು ಭಾರತದ ಹೈಕಮಿಷನ್ ಕಚೇರಿಯ ಅಧಿಕಾರಿಗಳಿಗೆ ನೀಡಲಾಯಿತು. 1988ರ ಡಿಸೆಂಬರ್ 31ರಂದು ಉಭಯ ರಾಷ್ಟ್ರಗಳು ಅಣು ಸ್ಥಾವರಗಳ ಮಾಹಿತಿ ವಿನಿಯಮ ಕುರಿತು ಒಪ್ಪಂದ ಮಾಡಿಕೊಂಡಿದ್ದವು.
ನವದೆಹಲಿಯಲ್ಲೂ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಣು ಸ್ಥಾವರಗಳ ಮಾಹಿತಿಯನ್ನು ಪಾಕಿಸ್ತಾನದ ಹೈಕಮಿಷನ್‌ಗೆ ನೀಡಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.