ನವದೆಹಲಿ: ಆಗಸ್ಟ್ 5 ಮತ್ತು 6 ರಂದು ಸೌದಿ ಅರೇಬಿಯಾ ಆಯೋಜಿಸಿರುವ ಉಕ್ರೇನ್ ಶಾಂತಿ ಮಾತುಕತೆ ಸಭೆಯಲ್ಲಿ ಭಾರತ ಪಾಲ್ಗೊಳ್ಳಲಿದೆ ಎಂದು ವಿದೇಶಾಂಗ ಸಚಿವರು ಗುರುವಾರ ತಿಳಿಸಿದ್ದಾರೆ.
ಜೆಡ್ಹಾದಲ್ಲಿ ನಡೆಯಲಿರುವ ಸಭೆಗೆ ಭಾರತಕ್ಕೆ ಆಮಂತ್ರಣ ನೀಡಲಾಗಿದೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಗಾಚಿ ತಿಳಿಸಿದ್ದಾರೆ.
‘ಭಾರತವು ಈ ಸಭೆಯಲ್ಲಿ ಭಾಗವಹಿಸಲಿದೆ. ನಮ್ಮ ಭಾಗವಹಿಸುವಿಕೆಯು ಮಾತುಕತೆ ಮತ್ತು ರಾಜತಾಂತ್ರಿಕತೆಯ ಮುಂದಿನ ದಾರಿ ಎಂಬ ನಮ್ಮ ದೀರ್ಘಕಾಲದ ನಿಲುವಿಗೆ ಅನುಗುಣವಾಗಿದೆ‘ ಎಂದು ಅವರು ಹೇಳಿದರು ಆಹ್ವಾನವನ್ನು ಪಡೆಯದ ರಷ್ಯಾ, ಚರ್ಚೆಗಳನ್ನು ಅನುಸರಿಸುವುದಾಗಿ ಸೋಮವಾರ ಹೇಳಿದೆ.
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರ ಪ್ರಸ್ತಾವದ ಮೇರೆಗೆ ವರ್ಷದ ಆರಂಭದಲ್ಲಿ ಸೌದಿ ಆರೇಬಿಯಾವು ಉಕ್ರೇನ್ ಮತ್ತು ಪ್ರಮುಖ ಅಭಿವೃದ್ಧಿಶೀಲ ಪಾಶ್ಚಿಮಾತ್ಯ ರಾಷ್ಟ್ರಗಳನ್ನು ಆಹ್ವಾನಿಸಿತ್ತು.
ರಷ್ಯಾ ಪಡೆಗಳನ್ನು ಹಿಂತೆಗೆಯುವಂತೆ ಮಾಡಿ, ಸೋವಿಯತ್ ನಂತರದ ಗಡಿಯಗಳನ್ನು ಮರುಸ್ಥಾಪನೆ ಮಾಡಲು ವೊಲೊಡಿಮಿರ್ ಝೆಲೆನ್‌ಸ್ಕಿ ಯೋಜಿಸಿದ್ದಾರೆ ಎಂದು ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.