ಕೊಲಂಬೊ: ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಭಾರತವು 75 ಬಸ್‌ಗಳನ್ನು ಹಸ್ತಾಂತರಿಸಿದೆ.
‘ನೆರೆ ಹೊರೆ ಪ್ರಥಮ‘ ಎಂಬ ನೀತಿಯಂತೆ ಭಾರತದಿಂದ ಈ ನೆರವು ದೊರೆತಿದ್ದು, ಒಟ್ಟು 500 ಬಸ್‌ಗಳನ್ನು ನೀಡಲಿದೆ. ಅದರ ಭಾಗವಾಗಿ 75 ಬಸ್‌ಗಳನ್ನು ನೀಡಲಾಗಿದೆ ಎಂದು ಭಾರತೀಯ ಹೈಕಮಿಷನರ್ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಳೆದ ತಿಂಗಳು ಭಾರತವು ಲಂಕಾದ ಪೊಲೀಸ್ ಇಲಾಖೆಗೆ 125 ಎಸ್‌ಯುವಿ ಗಳನ್ನು ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.