ADVERTISEMENT

ಚಾಗೋಸ್‌ ಬಿಕ್ಕಟ್ಟು | ಮಾರಿಷಿಯಸ್‌ಗೆ ಬೆಂಬಲ ಅಚಲ: ಭಾರತ

ಪಿಟಿಐ
Published 16 ಜುಲೈ 2024, 15:41 IST
Last Updated 16 ಜುಲೈ 2024, 15:41 IST
ಮಾರಿಷಿಯಸ್‌ ಪ್ರವಾಸದಲ್ಲಿರುವ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಪ್ರಧಾನಿ ಪ್ರವಿಂದಕುಮಾರ್‌ ಜುಗ್ನಾಥ್‌ ಅವರೊಂದಿಗೆ ಮಂಗಳವಾರ ಮಾತುಕತೆ ನಡೆಸಿದರು –ಪಿಟಿಐ ಚಿತ್ರ 
ಮಾರಿಷಿಯಸ್‌ ಪ್ರವಾಸದಲ್ಲಿರುವ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಪ್ರಧಾನಿ ಪ್ರವಿಂದಕುಮಾರ್‌ ಜುಗ್ನಾಥ್‌ ಅವರೊಂದಿಗೆ ಮಂಗಳವಾರ ಮಾತುಕತೆ ನಡೆಸಿದರು –ಪಿಟಿಐ ಚಿತ್ರ     

ಪೋರ್ಟ್‌ ಲೂಯಿಸ್(ಮಾರಿಷಿಯಸ್): ಚಾಗೋಸ್‌ ದ್ವೀಪಸಮೂಹಕ್ಕೆ ಸಂಬಂಧಿಸಿದ ಸಮಸ್ಯೆ ವಿಚಾರವಾಗಿ ಮಾರಿಷಿಯಸ್‌ಗೆ ತಾನು ನೀಡಿರುವ ಬೆಂಬಲ ಅಚಲವಾದುದು ಎಂದು ಭಾರತ ಮಂಗಳವಾರ ಹೇಳಿದೆ.

ದ್ವಿಪಕ್ಷೀಯ ಸಂಬಂಧ ವೃದ್ಧಿಗಾಗಿ ಮಾರಿಷಿಯಸ್‌ಗೆ ಎರಡು ದಿನಗಳ ಪ್ರವಾಸ ಕೈಗೊಂಡಿರುವ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌, ಭಾರತದ ಈ ನಿಲುವನ್ನು ದ್ವೀಪ ರಾಷ್ಟ್ರಕ್ಕೆ ತಿಳಿಸಿದರು.

ಪ್ರಧಾನಿ ಪ್ರವಿಂದಕುಮರ್‌ ಜುಗ್ನಾಥ್ ಅವರೊಂದಿಗೆ ದ್ವಿಪಕ್ಷೀಯ ಸಭೆಯಲ್ಲಿ ಈ ಕುರಿತು ಮಾತನಾಡಿದ ಜೈಶಂಕರ್‌, ‘ಮಾರಿಷಿಯಸ್‌ನೊಂದಿಗೆ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ಭಾರತ ಎದುರು ನೋಡುತ್ತದೆ. ಚಾಗೋಸ್‌ ದ್ವೀಪಸಮೂಹ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಮಾರಿಷಿಯಸ್‌ಗೆ ನೀಡಿರುವ ಬೆಂಬಲವನ್ನು ಭಾರತ ಮುಂದುವರಿಸಲಿದೆ’ ಎಂದರು.

ADVERTISEMENT

ಭಾರತದ ಈ ನಿಲುವಿಗೆ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವ ಮನೀಷ್‌ ಗಾಬಿನ್, ‘ಮಾರಿಷಿಯಸ್‌ಗೆ ಭಾರತ ನೀಡಿರುವ ಬೆಂಬಲವನ್ನು ಮುಂದುವರಿಸುವುದಾಗಿ ಮತ್ತೊಮ್ಮೆ ದೃಢಪಡಿಸಿರುವ ಜೈಶಂಕರ್ ಅವರಿಗೆ ನಮ್ಮ ಕೃತಜ್ಞತೆ ಸಲ್ಲಿಸುತ್ತೇವೆ’ ಎಂದು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.