ADVERTISEMENT

ಭಾರತದಿಂದ ಭೂತಾನ್‌ಗೆ ₹ 500 ಕೋಟಿ ಬಿಡುಗಡೆ

ಪಿಟಿಐ
Published 27 ಮಾರ್ಚ್ 2024, 12:36 IST
Last Updated 27 ಮಾರ್ಚ್ 2024, 12:36 IST
   

ಥಿಂಪು: ಗ್ಯಾಲ್‌ಸಂಗ್‌ ಯೋಜನೆಗೆ ಸಂಬಂಧಿಸಿದಂತೆ ಮೂಲಸೌಕರ್ಯ ವೃದ್ಧಿಗೆ ಭಾರತವು ಎರಡನೇ ಕಂತಾದ ₹ 500 ಕೋಟಿಯನ್ನು ಭೂತಾನ್‌ಗೆ ಬಿಡುಗಡೆ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್‌ 23ರಂದು ಭೂತಾನ್‌ಗೆ ಎರಡು ದಿನಗಳ ಭೇಟಿ ನೀಡಿದ್ದ ವೇಳೆ, ಹಿಮಾಲಯ ದೇಶದ ಅಭಿವೃದ್ಧಿಗಾಗಿ ಮುಂದಿನ ಐದು ವರ್ಷಗಳಲ್ಲಿ ₹ 10,000 ಕೋಟಿ ನೆರವು ನೀಡುವುದಾಗಿ ಘೋಷಣೆ ಮಾಡಿದ್ದರು. ಅದಾದ ವಾರದಲ್ಲಿಯೇ ದೆಹಲಿಯಿಂದ ಎರಡನೇ ಕಂತಿನ ಹಣ ಬಿಡುಗಡೆ ಆಗಿದೆ. ಈ ವರ್ಷದ ಜನವರಿ 28ರಂದು ಮೊದಲ ಕಂತಾದ ₹ 500 ಕೋಟಿ ಬಿಡುಗಡೆ ಮಾಡಲಾಗಿತ್ತು.

ಭೂತಾನ್‌ನಲ್ಲಿರುವ ಭಾರತದ ರಾಯಭಾರಿ ಸುಧಾಕರ್‌ ದಲೇಲಾ ಅವರು, ಭೂತಾನ್‌ ವಿದೇಶಾಂಗ ವ್ಯವಹಾರಗಳ ಸಚಿವ ಲಿಯಾನ್‌ಪೋ ಡಿ.ಎನ್‌. ಧುಂಗ್ಯೆಲ್‌ ಅವರಿಗೆ ಎರಡನೇ ಕಂತಿನ ಮೊತ್ತವನ್ನು ಹಸ್ತಾಂತರಿಸಿದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.