ನವದೆಹಲಿ: ಪ್ರವಾಹ ಪೀಡಿತ ಕೆನ್ಯಾಗೆ 40 ಟನ್‌ನಷ್ಟು ಪರಿಹಾರ ಸಾಮಗ್ರಿಗಳು ಹಾಗೂ ಔಷಧವನ್ನು ಭಾರತ ಮಂಗಳವಾರ ರವಾನಿಸಿದೆ. ಅಗತ್ಯ ಸರಕುಗಳನ್ನು ಸೇನಾ ವಿಮಾನದ ಮೂಲಕ ಆಫ್ರಿಕಾ ಖಂಡದ ದೇಶಕ್ಕೆ ಕಳುಹಿಸಲಾಯಿತು.
‘ಎರಡನೇ ಬಾರಿ 40 ಟನ್ ಪರಿಹಾರ ಸಾಮಗ್ರಿಗಳು ಮತ್ತು ಔಷಧಗಳನ್ನು ಕೀನ್ಯಾಗೆ ಕಳುಹಿಸಲಾಗಿದೆ. ಈ ಐತಿಹಾಸಿಕ ಪಾಲುದಾರಿಕೆಗೆ ನಿಂತಿದ್ದು, ವಿಶ್ವಕ್ಕೇ ವಿಶ್ವಬಂಧು’ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ‘ಎಕ್ಸ್’ನಲ್ಲಿ ಬರೆದುಕೊಂಡಿದ್ದಾರೆ.
ಕಳೆದ ವಾರ ಮೊದಲ ಹಂತದ ಪರಿಹಾರ ಸಾಮಗ್ರಿಗಳು ತಲುಪಿದ್ದವು. ವಿವಿಧ ಭಾಗಗಳಲ್ಲಿ ಉಂಟಾಗಿರುವ ಪ್ರವಾಹದಿಂದ ಕೆನ್ಯಾ ಸರ್ಕಾರದ ಅಂಕಿ–ಅಂಶಗಳ ಪ್ರಕಾರ ಕನಿಷ್ಠ 267 ಜನ ಸಾವಿಗೀಡಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.