ADVERTISEMENT

ರಷ್ಯಾದಿಂದ ಭಾರತ ರಿಯಾಯಿತಿ ದರದಲ್ಲಿ ತೈಲ ಖರೀದಿಗೆ ಅಡ್ಡಿಯಿಲ್ಲ: ಅಮೆರಿಕ

ಪಿಟಿಐ
Published 16 ಮಾರ್ಚ್ 2022, 1:36 IST
Last Updated 16 ಮಾರ್ಚ್ 2022, 1:36 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್‌: ಭಾರತವು ರಷ್ಯಾ ಪ್ರಸ್ತಾಪಿಸಿರುವ ರಿಯಾಯಿತಿ ದರದ ಕಚ್ಚಾ ತೈಲ ಮತ್ತು ಇತರ ಉತ್ಪನ್ನಗಳನ್ನು ಖರೀದಿಸುವುದರಿಂದ ಅಮೆರಿಕದ ನಿರ್ಬಂಧಗಳನ್ನು ಉಲ್ಲಂಘಿಸಿದಂತೆ ಆಗುವುದಿಲ್ಲ ಎಂದು ಶ್ವೇತಭವನ ತಿಳಿಸಿದೆ.

'ಯಾವುದೇ ರಾಷ್ಟ್ರಗಳ ಜೊತೆಗಿನ ನಿರ್ಬಂಧಗಳು ಮೊದಲಿನಂತೆ ಮುಂದುವರಿಯುತ್ತವೆ ಎಂಬುದು ನಮ್ಮ ಸಂದೇಶವಾಗಿದೆ' ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಜೆನ್‌ ಪಿಸಾಕಿ ತಿಳಿಸಿದ್ದಾರೆ.

ಈ ಸಂದರ್ಭ ರಷ್ಯಾ ಪ್ರಸ್ತಾಪಿಸಿರುವ ರಿಯಾಯಿತಿ ದರದ ತೈಲವನ್ನು ಭಾರತ ಖರೀದಿಸಲು ನಿರ್ದರಿಸುವ ಸಾಧ್ಯತೆಯ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ, 'ಇದರಿಂದ ನಿರ್ಬಂಧಗಳನ್ನು ಉಲ್ಲಂಘಿಸಿದಂತೆ ಆಗುತ್ತದೆ ಎಂದು ನನಗನಿಸುತ್ತಿಲ್ಲ' ಎಂದು ಪಿಸಾಕಿ ಹೇಳಿದ್ದಾರೆ.

ADVERTISEMENT

'ಆದರೆ ಪ್ರಸ್ತುತ ಸಂದರ್ಭದ ಕುರಿತು ಇತಿಹಾಸದ ಪುಸ್ತಕಗಳಲ್ಲಿ ಉಲ್ಲೇಖಗೊಳ್ಳುವುದರಿಂದ, ನೀವು ಯಾರ ಪರವಾಗಿ ನಿಲ್ಲಬೇಕು ಎಂಬುದನ್ನ ಯೋಚಿಸಬೇಕು. ರಷ್ಯಾದ ನಾಯಕತ್ವವನ್ನು ಬೆಂಬಲಿಸುವುದು ಅತಿಕ್ರಮಣವನ್ನು ಬೆಂಬಲಿಸಿದಂತೆ. ಇದರಿಂದ ವಿಧ್ವಂಸಕ ಪರಿಣಾಮ ಬೀರಲಿದೆ' ಎಂದು ಪಿಸಾಕಿ ತಿಳಿಸಿದ್ದಾರೆ.

ಉಕ್ರೇನ್‌ ಮೇಲೆ ರಷ್ಯಾದ ಅತಿಕ್ರಮಣವನ್ನು ಭಾರತ ಬೆಂಬಲಿಸಿಲ್ಲ. ಉಭಯ ರಾಷ್ಟ್ರಗಳು ನಾಯಕರು ಮಾತುಕತೆ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಎಂದು ಭಾರತ ಆಗ್ರಹಿಸಿದೆ. ರಷ್ಯಾ ವಿರುದ್ಧದ ವಿಶ್ವಸಂಸ್ಥೆಯ ನಿರ್ಣಯಗಳಿಂದಲೂ ಭಾರತ ದೂರ ಉಳಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.