ADVERTISEMENT

ಭಾರತ-ಉಕ್ರೇನ್ 4 ಒಪ್ಪಂದಗಳಿಗೆ ಸಹಿ, ರಷ್ಯಾ ಸಂಘರ್ಷದ ಬಗ್ಗೆಯೂ ಚರ್ಚೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಆಗಸ್ಟ್ 2024, 13:01 IST
Last Updated 23 ಆಗಸ್ಟ್ 2024, 13:01 IST
<div class="paragraphs"><p>ನರೇಂದ್ರ ಮೋದಿ,&nbsp;ವೊಲೊಡಿಮಿರ್ ಝೆಲೆನ್‌ಸ್ಕಿ</p></div>

ನರೇಂದ್ರ ಮೋದಿ, ವೊಲೊಡಿಮಿರ್ ಝೆಲೆನ್‌ಸ್ಕಿ

   

(ರಾಯಿಟರ್ಸ್ ಚಿತ್ರ)

ಕೀವ್: ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರೊಂದಿಗೆ ಭಾರತ ಪ್ರಧಾನಿ ನರೇಂದ್ರ ಅವರು ಇಂದು (ಶುಕ್ರವಾರ) ಸಭೆ ನಡೆಸಿದರು. ಈ ವೇಳೆ ಭಾರತ ಮತ್ತು ಉಕ್ರೇನ್ ನಾಲ್ಕು ಒಪ್ಪಂದಗಳಿಗೆ ಸಹಿ ಹಾಕಿವೆ.

ADVERTISEMENT

ಈ ಒಪ್ಪಂದಗಳು ಕೃಷಿ, ಆಹಾರ ಉದ್ಯಮ, ಔಷಧ ಮತ್ತು ಸಂಸ್ಕೃತಿ ಹಾಗೂ ಮಾನವೀಯ ನೆರವು ಕ್ಷೇತ್ರಗಳಲ್ಲಿ ಸಹಕಾರವನ್ನು ಒದಗಿಸುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಷ್ಯಾ-ಉಕ್ರೇನ್ ಸಂಘರ್ಷದ ಬಗ್ಗೆಯೂ ಮಾತುಕತೆ...

'ಸದ್ಯ ನಡೆಯುತ್ತಿರುವ ಸಂಘರ್ಷದ ಕುರಿತು ಚರ್ಚಿಸಿದೆವು. ಶಾಂತಿ ಕಾಪಾಡುವುದೇ ಈ ಸಭೆಯ ಪ್ರಮುಖ ನಿರ್ಧಾರವಾಗಿತ್ತು. ಮಾನವೀಯತೆಯ ಒಳಿತಿಗಾಗಿ ಸಂಘರ್ಷವನ್ನು ಶಾಂತಿಯುತವಾಗಿ ಬಗೆಹರಿಸಬೇಕಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಚರ್ಚೆ ಫಲಪ್ರದ...

'ಕೀವ್‌ನಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರೊಂದಿಗೆ ಫಲಪ್ರದ ಚರ್ಚೆ ನಡೆಸಿದ್ದೇನೆ. ಉಕ್ರೇನ್ ಜೊತೆ ಆರ್ಥಿಕ ಸಂಬಂಧ ಗಾಢವಾಗಿಸಲು ಭಾರತ ಉತ್ಸುಕವಾಗಿದೆ. ಕೃಷಿ, ತಂತ್ರಜ್ಞಾನ, ಫಾರ್ಮಾ ಮತ್ತು ಇತರೆ ಕ್ಷೇತ್ರಗಳಲ್ಲಿ ಸಹಕಾರವನ್ನು ಉತ್ತೇಜಿಸಲು ಮಾತುಕತೆ ನಡೆಸಿದ್ದೇವೆ. ಸಾಂಸೃತಿಕ ಕ್ಷೇತ್ರದಲ್ಲೂ ಸಂಬಂಧ ಗಟ್ಟಿ ಮಾಡಲು ಚರ್ಚೆ ನಡೆಸಿದ್ದೇವೆ' ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ಉಕ್ರೇನ್‌ಗೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿ...

ನರೇಂದ್ರ ಮೋದಿ ಅವರು ಉಕ್ರೇನ್‌ಗೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿ ಎನಿಸಿದ್ದಾರೆ. ಪೋಲೆಂಡ್‌ಗೆ ಎರಡು ದಿನಗಳ ಪ್ರವಾಸ ಕೈಗೊಂಡಿದ್ದ ಮೋದಿ ಅಲ್ಲಿಂದ ಉಕ್ರೇನ್‌ ರಾಜಧಾನಿ ಕೀವ್‌ಗೆ ತೆರಳಿದರು. ಸುಮಾರು 10 ತಾಸಿನ ರೈಲು ಪ್ರಯಾಣದ ಬಳಿಕ ಪ್ರಧಾನಿ ಮೋದಿ ಅವರು ಉಕ್ರೇನ್‌ ರಾಜಧಾನಿಗೆ ತಲುಪಿದರು.

ನರೇಂದ್ರ ಮೋದಿ, ವೊಲೊಡಿಮಿರ್ ಝೆಲೆನ್‌ಸ್ಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.