ADVERTISEMENT

ಭಾರತ–ಅಮೆರಿಕ ಅನಿವಾರ್ಯ ಪಾಲುದಾರರು: ಆ್ಯಂಟನಿ ಬ್ಲಿಂಕೆನ್‌

ಪಿಟಿಐ
Published 24 ಜೂನ್ 2023, 23:30 IST
Last Updated 24 ಜೂನ್ 2023, 23:30 IST
ಆ್ಯಂಟನಿ ಬ್ಲಿಂಕೆನ್‌
ಆ್ಯಂಟನಿ ಬ್ಲಿಂಕೆನ್‌   

ವಾಷಿಂಗ್ಟನ್‌: ‘ಭಾರತ ಹಾಗೂ ಅಮೆರಿಕದ ನಡುವಿನ ಎರಡೂವರೆ ವರ್ಷದ ಸಂಬಂಧವು ಉಭಯ ದೇಶಗಳನ್ನು ಅನಿವಾರ್ಯ ಪಾಲುದಾರರನ್ನಾಗಿ ಮಾರ್ಪಡಿಸಿದೆ’ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್‌  ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶ್ವೇತ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಔತಣ ಕೂಟದಲ್ಲಿ ಮಾತನಾಡಿದ ಅವರು, ‘ಸೆಮಿಕಂಡಕ್ಟರ್‌ ಕ್ಷೇತ್ರದಿಂದ ಬಾಹ್ಯಾಕಾಶದವರೆಗೆ, ಶಿಕ್ಷಣ ಕ್ಷೇತ್ರದಿಂದ ಆಹಾರ ಭದ್ರತೆಯಂಥ ಹೆಚ್ಚಿನ ವಿಷಯಗಳಲ್ಲಿ ಎರಡೂ ದೇಶಗಳು ಹಿಂದೆಂದಿಗಿಂತಲೂ ನಿಕಟವಾಗಿ ಕೆಲಸ ಮಾಡಿವೆ’ ಎಂದು ತಿಳಿಸಿದರು.

‘ಉಭಯ ದೇಶಗಳ ನಡುವೆ ಇರುವ ಅನಿವಾರ್ಯ ಪಾಲುದಾರಿಕೆಯನ್ನು 21ನೇ ಶತಮಾನದ ಸಂಬಂಧವನ್ನು ವಿವರಿಸುತ್ತದೆ ಎಂಬುದಾಗಿ ಅಧ್ಯಕ್ಷ ಜೋ ಬೈಡನ್‌ ಹೇಳಿದ್ದಾರೆ’ ಎಂದರು.

ADVERTISEMENT

‘ಇಂಡೋ– ಪೆಸಿಫಿಕ್‌ ಪ್ರದೇಶದಲ್ಲಿ ಹಾಗೂ ಜಗತ್ತಿನಲ್ಲಿ ಶಾಂತಿ ಹಾಗೂ ಭದ್ರತೆ ಕುರಿತು ಪ್ರಚಾರ ಮಾಡುವುದು, ಸಾಂಕ್ರಾಮಿಕ ರೋಗಗಳ ವಿರುದ್ಧ ಹೋರಾಡುವುದು, ನೈಸರ್ಗಿಕ ವಿಪತ್ತುಗಳ ಸಮಯದಲ್ಲಿ ಸಹಾಯ ಮಾಡುವುದು, ಕಡಲ ತೀರದ ಭದ್ರತೆ ಹೆಚ್ಚಿಸುವುದು ಹಾಗೂ ವಿಶ್ವಸಂಸ್ಥೆಯ ಸನ್ನದು ಪರವಾಗಿ ನಿಲ್ಲುವುದು ಸೇರಿದಂತೆ ಅನೇಕ ಕೆಲಸಗಳನ್ನು ಭಾರತ– ಅಮೆರಿಕ ಒಟ್ಟಾಗಿ ಮಾಡಿವೆ’ ಎಂದೂ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.