ವಾಷಿಂಗ್ಟನ್: ಭಾರತ ಮತ್ತು ಅಮೆರಿಕ ನಡುವಿನ ಸಂಬಂಧ ಹಿಂದೆಂದಿಗಿಂತಲೂ ಗಟ್ಟಿಯಾಗಿದೆ ಎಂದು ಅಮೆರಿಕದ ಉನ್ನತ ರಕ್ಷಣಾ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.
ಇಂಡೋ-ಪೆಸಿಫಿಕ್ ಭದ್ರತಾ ವ್ಯವಹಾರಗಳ ರಕ್ಷಣಾ ವಿಭಾಗದ(ಪೆಂಟಗನ್) ಸಹಾಯಕ ಕಾರ್ಯದರ್ಶಿ ಎಲಿ ಎಸ್. ರಾಟ್ನರ್ ಅವರು ಇಂಡೋ–ಪೆಸಿಫಿಕ್ ಸಭಾಸದನ ಉಪಸಮಿತಿಯ ಸದಸ್ಯರ ಪ್ರಶ್ನೆಗೆ ಉತ್ತರಿಸುವ ವೇಳೆ ಅಮೆರಿಕ ಹಲವಾರು ಕ್ಷೇತ್ರಗಳಲ್ಲಿ ಭಾರತದೊಂದಿಗೆ ತನ್ನ ಸಂಬಂಧವನ್ನು ಬಲಪಡಿಸುತ್ತಿದೆ ಎಂದು ವಿವರಿಸಿದರು.
ಜಂಟಿ–ಉತ್ಪಾದನೆ ಸೇರಿ ಜೆಟ್ ಎಂಜಿನ್‌ಗಳಲ್ಲಿ ಉತ್ಪಾದನೆಯಲ್ಲಿ ಪ್ರಮುಖವಾಗಿ ಮುನ್ನಡೆ ಸಾಧಿಸಿದ್ದೇವೆ,, ನಮ್ಮ ರಕ್ಷಣಾ ಕೈಗಾರಿಕಾ ನೆಲೆಯ ಸಂಯೋಜನೆಗೆ ಶಸ್ತ್ರಸಜ್ಜಿತ ವಾಹನಗಳ ಮೇಲೆ ರೂಪಿಸಿರುವ ಕೆಲವು ಹೊಸ ಯೋಜನೆಗಳು ಬಾಂದವ್ಯ ವೃದ್ಧಿಗೆ ಒಂದು ಪ್ರಮುಖ ಮಾರ್ಗವಾಗಿದೆ ರಾಟ್ನರ್ ಹೇಳಿದರು.
ಭಾರತದೊಂದಿಗೆ ಯುಎಸ್ ಸಂಬಂಧವನ್ನು ಹೇಗೆ ವಿವರಿಸುತ್ತೀರಿ ಮತ್ತು ಅದನ್ನು ಬಲಪಡಿಸಲು ಏನು ಬೇಕು ಎನ್ನುವ ಪ್ರಶ್ನೆಗೆ ಉತ್ತರಿಸಿದ ರಾಟ್ನರ್, ‘ನಮ್ಮ ಖಾಸಗಿ ವಲಯಗಳ ನಡುವಿನ ಸಂಬಂಧಗಳನ್ನು ವಿಶೇಷವಾಗಿ ರಕ್ಷಣಾ ಇಲಾಖೆಯಲ್ಲಿ ತಂತ್ರಜ್ಞಾನಗಳಲ್ಲಿ ಬಲಪಡಿಸಲು ಕೆಲಸ ಮಾಡುತ್ತಿದ್ದೇವೆ. ಅದಕ್ಕಾಗಿ ಕೆಲವು ಪ್ರಮುಖ ಹೊಸ ಉಪಕ್ರಮಗಳನ್ನು ಜಾರಿಗೆ ತಂದಿದ್ದೇವೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.