ADVERTISEMENT

ಅಮೆರಿಕ ಅಧ್ಯಕ್ಷೀಯ ಚುನಾವಣೆ: ಭಾರತ ಮೂಲದ ವಿವೇಕ್‌ ರಾಮಸ್ವಾಮಿ ಸ್ಪರ್ಧೆ

ಪಿಟಿಐ
Published 22 ಫೆಬ್ರುವರಿ 2023, 16:15 IST
Last Updated 22 ಫೆಬ್ರುವರಿ 2023, 16:15 IST
ವಿವೇಕ್‌ ರಾಮಸ್ವಾಮಿ
ವಿವೇಕ್‌ ರಾಮಸ್ವಾಮಿ   

ವಾಷಿಂಗ್ಟನ್‌: ಭಾರತ ಮೂಲದ ಅಮೆರಿಕ ನಿವಾಸಿ, ಉದ್ಯಮಿ ವಿವೇಕ್‌ ರಾಮಸ್ವಾಮಿ ಅವರು 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದ್ದು, ಅಮೆರಿಕದ ಹಿರಿಮೆಯನ್ನು ಉತ್ತುಂಗಕ್ಕೇರಿಸುವ ಹಾಗೂ ಚೀನಾದ ಮೇಲಿನ ಅವಲಂಬನೆಯನ್ನು ಕೊನೆಗಾಣಿಸುವ ಭರವಸೆ ನೀಡಿದ್ದಾರೆ.

ನಿಕ್ಕಿ ಹ್ಯಾಲೆ ನಂತರ ರಿಪಬ್ಲಿಕನ್‌ ಪಕ್ಷದ ಅಧ್ಯಕ್ಷೀಯ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಘೋಷಿಸಿರುವ ಎರಡನೇ ಅಭ್ಯರ್ಥಿ ಇವರಾಗಿದ್ದಾರೆ.

ವಿವೇಕ್‌ ರಾಮಸ್ವಾಮಿ (37) ಅವರು ಕೇರಳದಿಂದ ವಲಸೆ ಹೋಗಿದ್ದ ದಂಪತಿಯ ಪುತ್ರ. ಮಂಗಳವಾರ ಫಾಕ್ಸ್‌ ನ್ಯೂಸ್‌ ಪ್ರೈಮ್‌ ಟೈಮ್‌ನಲ್ಲಿ ರಾಜಕೀಯ ವಿಶ್ಲೇಷಕ ಟಕ್ಕರ್‌ ಕಾರ್ಲ್ಸನ್ ನಡೆಸಿದ ಸಂದರ್ಶನದಲ್ಲಿ ಚುನಾವಣಾ ಸ್ಪರ್ಧೆಯನ್ನು ಅವರು ಘೋಷಿಸಿದರು.

ADVERTISEMENT

ಮುಂದಿನ ಅಮೆರಿಕ ಅಧ್ಯಕ್ಷೀಯ ಚುನಾವಣೆಯು 2024 ನವೆಂಬರ್ 5 ರಂದು ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.