ವಾಷಿಂಗ್ಟನ್: ಅಮೆರಿಕದಲ್ಲಿನ ಅಕ್ರಮ ವಲಸಿಗರ ಮಕ್ಕಳಿಗೆ ಪೌರತ್ವ ನೀಡುವುದನ್ನು ತಾವು ವಿರೋಧಿಸುವುದಾಗಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ, ಭಾರತ ಮೂಲದ ಅಮೆರಿಕ ಸಂಸದ ವಿವೇಕ್ ರಾಮಸ್ವಾಮಿ ಹೇಳಿದ್ದಾರೆ.
ರಿಪಬ್ಲಿಕನ್ ಪಕ್ಷದ ನಾಯಕರೂ ಆಗಿರುವ ರಾಮಸ್ವಾಮಿ ಅವರು, ವಲಸಿಗರಿಗೆ ಸಂಬಂಧಿಸಿದ ನೀತಿಗಳಲ್ಲಿ ಸಮಗ್ರ ಬದಲಾವಣೆ ತರುವ ಕುರಿತು ಪ್ರಸ್ತಾಪಿಸಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
ಅಕ್ರಮ ವಲಸಿಗರು ಮತ್ತು ಅಮೆರಿಕದಲ್ಲಿ ಜನಿಸಿದ ಅವರ ಮಕ್ಕಳ ಗಡೀಪಾರು ಕುರಿತಂತೆ ನೀವು ನೀಡುವ ಕಾನೂನಾತ್ಮಕ ಭರವಸೆ ಏನು ಎಂಬ ಪ್ರಶ್ನೆಗೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.
38 ವರ್ಷದ ರಾಮಸ್ವಾಮಿ ಈ ಮೊದಲು ಎಚ್–1ಬಿ ವೀಸಾ ಕಾರ್ಯಕ್ರಮವನ್ನು ಟೀಕಿಸಿದ್ದರು. ಈಗಿರುವ ‘ಲಾಟರಿ’ ವ್ಯವಸ್ಥೆಗೆ ಬದಲಾಗಿ, ಅಮೆರಿಕದ ಅಗತ್ಯಕ್ಕೆ ಪೂರಕವಾಗಿ ವಲಸಿಗರಿಗೆ ಮೆರಿಟ್ ಮತ್ತು ಕೌಶಲ ಆಧರಿತ ಯೋಜನೆ ಜಾರಿಗೊಳಿಸಬೇಕು ಎಂದು ಆಗ್ರಹಪಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.