ADVERTISEMENT

ಅಮೆರಿಕ: ಭಾರತೀಯ ವ್ಯಕ್ತಿ ವಿರುದ್ಧ ಜನಾಂಗೀಯ ನಿಂದನೆ

ಪಿಟಿಐ
Published 1 ಸೆಪ್ಟೆಂಬರ್ 2022, 14:08 IST
Last Updated 1 ಸೆಪ್ಟೆಂಬರ್ 2022, 14:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನ್ಯೂಯಾರ್ಕ್‌: ಭಾರತೀಯ ಮೂಲದ ವ್ಯಕ್ತಿಯೊಬ್ಬರು ತಮ್ಮದೇ ದೇಶದ ವ್ಯಕ್ತಿಯಿಂದ ಜನಾಂಗೀಯವಾಗಿ ನಿಂದನೆಗೆ ಒಳಗಾದ ಘಟನೆಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ.

ಆಗಸ್ಟ್‌ 21ರಂದು ಕ್ಯಾಲಿಫೋರ್ನಿಯಾದ ಗ್ರಿಮ್ಮರ್‌ ಬುಲೆವಾರ್ಡ್‌ನ ಟ್ಯಾಕೊ ಬೆಲ್‌ನಲ್ಲಿ ಭಾರತೀಯ ಮೂಲದ ಕೃಷ್ಣನ್‌ ಜಯರಾಮನ್‌ ಅವರನ್ನು ಸಿಂಗ್ ತೇಜಿಂದರ್‌ ಎಂಬುವರು ಜನಾಂಗೀಯವಾಗಿ ನಿಂದಿಸಿದ್ದಾರೆ. ‘ಕೊಳಕು ಹಿಂದೂ’, ‘ಅಹಸ್ಯ ತರಿಸುವ ನಾಯಿ’ ಎಂದು ಹೀಗಳೆದಿದ್ದಾರೆ ಎಂದು ಎನ್‌ಬಿಸಿ ನ್ಯೂಸ್‌ ವರದಿ ಮಾಡಿದೆ. ಜನಾಂಗೀಯ ನಿಂದನೆಯ ವಿಡಿಯೊವನ್ನು ಜಯರಾಮನ್ ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.

ನಾಗರಿಕರ ಹಕ್ಕು ಉಲ್ಲಂಘನೆ, ಶಾಂತಿ ಕದಡುವ ಯತ್ನ ಆರೋಪದಲ್ಲಿ ತೇಜಿಂದರ್‌ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಟೆಕ್ಸಾಸ್‌ನಲ್ಲಿ ನಾಲ್ವರು ಭಾರತೀಯ ಮಹಿಳೆಯರನ್ನು ಅಮೆರಿಕದ ಮಹಿಳೆಯೊಬ್ಬರು ಜನಾಂಗೀಯವಾಗಿ ನಿಂದಿಸಿ, ಹಲ್ಲೆ ಮಾಡಿದ ಬೆನ್ನಲ್ಲೇ ಈ ಘಟನೆ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.