ಲಂಡನ್: ಭಾರತದ ಅಗರ್ಭ ಶ್ರೀಮಂತರೊಬ್ಬರ ಮಗಳು ಬ್ರಿಟನ್‍ನಲ್ಲಿರುವ ಪ್ರತಿಷ್ಠಿತ ವಿಶ್ವ ವಿದ್ಯಾನಿಲಯವೊಂದರಲ್ಲಿ ಕಲಿಯುತ್ತಿದ್ದಾಳೆ.ಆಕೆಯ ಕಲಿಕೆ ಸುಸೂತ್ರವಾಗಿ ನಡೆಯಲು ಐಷಾರಾಮಿ ಮನೆಖರೀದಿಸಿದ ಅಪ್ಪ, ಮಗಳ ಆರೈಕೆಗಾಗಿ12 ಪರಿಚಾರಕರನ್ನು ನೇಮಕ ಮಾಡಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.
ಇಲ್ಲಿ ಸೇಂಟ್ ಆ್ಯಂಡ್ರೂಸ್ ವಿಶ್ವವಿದ್ಯಾನಿಲಯದಲ್ಲಿ 4 ವರ್ಷ ಅವಧಿಯ ಕೋರ್ಸ್ಗೆ ಸೇರಿರುವ ವಿದ್ಯಾರ್ಥಿನಿಯ ಹೆಸರನ್ನು ಬಹಿರಂಗ ಪಡಿಸಿಲ್ಲ. ಇದೇ ವಿಶ್ವವಿದ್ಯಾನಿಲಯದಲ್ಲಿಯೇ ಬ್ರಿಟನ್ ರಾಜಕುಮಾರ ವಿಲಿಯಮ್ಸ್ ಮತ್ತು ಕೇಟ್ ಮಿಡಲ್‍ಟನ್ ಕಲಿಕೆ ಪೂರೈಸಿದ್ದರು.
ಈ ವಿದ್ಯಾರ್ಥಿನಿಗಾಗಿ ಅವಳ ಅಪ್ಪ ಸ್ಕಾಟ್‍ಲೆಂಡ್‍ನ ಸೇಂಟ್ ಆ್ಯಂಡ್ರೂಸ್‍ನಲ್ಲಿ ದೊಡ್ಡ ಮನೆಯೊಂದನ್ನು ಖರೀದಿಸಿದ್ದಾರೆ.
ದಿ ಸನ್ ಪತ್ರಿಕೆ ಈ ವಿದ್ಯಾರ್ಥಿಯ ಬಗ್ಗೆಯಿರುವ ವರದಿಯಲ್ಲಿ ಆಕೆಯನ್ನು Britain’s poshest student ಎಂದು ಬಿಂಬಿಸಿದೆ. ದಿ ಸನ್ ಪತ್ರಿಕೆಯ ವರದಿ ಪ್ರಕಾರ, ವಿದ್ಯಾರ್ಥಿನಿಯ ಕುಟುಂಬವು ಪತ್ರಿಕೆಯಲ್ಲಿ ಜಾಹೀರಾತೊಂದನ್ನು ನೀಡಿತ್ತು. ಆ ಜಾಹೀರಾತು ಹೀಗಿದೆ.
ಮಗಳನ್ನು ನೋಡಿಕೊಳ್ಳಲು ಅಂದರೆ ನಿದ್ದೆಯಿಂದ ಎಬ್ಬಿಸಲು, ಬಾಗಿಲು ತೆರೆಯಲು, ಅಡುಗೆಯವರು, ಕೆಲಸದಾಕೆ, ಹೂತೋಟ ನೋಡಿಕೊಳ್ಳಲು ಮತ್ತು ಇನ್ನಿತರ ಕೆಲಸಗಳಿಗೆ ಒಟ್ಟು 12 ಮಂದಿಯ ಅಗತ್ಯವಿದೆ.
ಅಡುಗೆಯವರ ಬಗ್ಗೆ ಜಾಹೀರಾತು ಏಜೆನ್ಸಿ ಟ್ವೀಟ್ ಮಾಡಿದ್ದು ಹೀಗೆ: ಸೇಂಟ್ ಆ್ಯಂಡ್ರೂಸ್, ಸ್ಕಾಟ್‍ಲೆಂಡ್‍ನಲ್ಲಿರುವ ಅಗರ್ಭ ಶ್ರೀಮಂತ ಕುಟುಂಬವೊಂದಕ್ಕೆಭಾರತೀಯ ಶೈಲಿಯ ಅಡುಗೆ ಮಾಡಲು ಗೊತ್ತಿರುವ (ವಿಶೇಷವಾಗಿ ದಕ್ಷಿಣ ಭಾರತದ ತಿಂಡಿಯಾದ ದೋಸೆ), ಇಟಾಲಿಯನ್ ಮತ್ತು ಚೈನೀಸ್ ಅಡುಗೆ ಮಾಡಲು ತಿಳಿದಿರುವ ಬಾಣಸಿಗ ಬೇಕಾಗಿದ್ದಾರೆ.ನುರಿತ ಬಾಣಸಿಗರಿಗೆ ಆದ್ಯತೆ.
ಮನೆಕೆಲಸದಾಳುಗಳಿಗಿರುವಜಾಹೀರಾತು ಈ ರೀತಿ ಇದೆ. ತುಂಬಾ ಲವಲವಿಕೆಯ ವ್ಯಕ್ತಿತ್ವ ಹೊಂದಿರುವ ವ್ಯಕ್ತಿ ಬೇಕು.ಆಕೆಯ ಶಾಪಿಂಗ್, ರೆಡಿ ಮಾಡಿಸುವುದು, ಬೆಳಗ್ಗೆ ಎದ್ದೇಳಿಸುವ ಕೆಲಸವನ್ನು ಮಾಡುವವರು ಆಗಿರಬೇಕು.
ಇತ್ತೀಚಿಗಿನ ವರ್ಷಗಳಲ್ಲಿ ಮಕ್ಕಳ ಕಲಿಕೆಗಾಗಿ ಭಾರತೀಯರು ಲಂಡನ್‍ನಲ್ಲಿ ಆಸ್ತಿ ಖರೀದಿಸುತ್ತಿದ್ದಾರೆ.ಚೀನಾ ಮತ್ತು ರಷ್ಯಾದ ಜನರಂತೆಯೇಭಾರತೀಯರು ಕೂಡಾ ಅತೀ ಹೆಚ್ಚಿನ ಪ್ರಮಾಣದಲ್ಲಿ ಆಸ್ತಿ ಖರೀದಿಸುತ್ತಿದ್ದಾರೆ ಎಂದುಅಲ್ಲಿನ ರಿಯಲ್ ಎಸ್ಟೇಟ್ ಏಜೆಂಟ್‌ಗಳು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.