ADVERTISEMENT

ಕಾಂಚನ್‌ಜುಂಗಾ: ಭಾರತದ ಪರ್ವತಾರೋಹಿ ನಾರಾಯಣ ಅಯ್ಯರ್‌ ನಿಧನ

ಏಜೆನ್ಸೀಸ್
Published 6 ಮೇ 2022, 10:31 IST
Last Updated 6 ಮೇ 2022, 10:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಠ್ಮಂಡು (ಎಎಫ್‌ಪಿ): ನೇಪಾಳದ ಕಾಂಚನ್‌ಜುಂಗಾ ಪರ್ವತವನ್ನು ಏರುವ ವೇಳೆ, 26,900 ಅಡಿ ಎತ್ತರದಲ್ಲಿ ಭಾರತ ಮೂಲದ ನಾರಾಯಣ ಅಯ್ಯರ್‌ (52) ಎಂಬುವವರು ಮೃತಪಟ್ಟಿದ್ದಾರೆ.

ಈ ಕುರಿತು ಮಾಹಿತಿ ನೀಡಿದಪರ್ವಾತಾರೋಹಣ ಆಯೋಜಕ ಸಂಸ್ಥೆಯ ಪ್ರವರ್ತಕ ನಿವೇಶ್‌ ಕರ್ಕಿ, ‘ಅಯ್ಯರ್‌ ಅವರುನಿಧಾನವಾಗಿ ಪರ್ವತವನ್ನು ಏರುತ್ತಿದ್ದರು. ಅವರ ನೆರವಿಗೆಂದು ಇಬ್ಬರು ಮಾರ್ಗದರ್ಶಕರನ್ನು ನೇಮಿಸಲಾಗಿತ್ತು. ಅವರು ತುಂಬಾ ದಣಿದಿದ್ದರಿಂದ ಪರ್ವತವನ್ನು ಏರಲಾಗದೇ ಕುಸಿದು ಬಿದ್ದರು’ ಎಂದು ಹೇಳಿದರು.

‘ಅಯ್ಯರ್‌ ಅವರ ಕುಟುಂಬಕ್ಕೆ ಅವರ ಸಾವಿನ ವಿಷಯ ತಿಳಿಸಲಾಗಿದ್ದು, ಅವರ ಮೃತ ದೇಹ ಪಡೆಯಲು ಎಲ್ಲ ತಯಾರಿ ಮಾಡಿಕೊಳ್ಳಲಾಗುತ್ತಿದೆ’ ಎಂದು ಕರ್ಕಿ ತಿಳಿಸಿದರು.

ADVERTISEMENT

ನೇಪಾಳವು ಕಾಂಚನ್‌ಜುಂಗಾ ಪರ್ವತಾರೋಹಣಕ್ಕೆ ಈ ವರ್ಷ ಒಟ್ಟು 68 ಪ್ರವಾಸಿಗರಿಗೆ ಅನುಮತಿ ನೀಡಿದ್ದು,ಪರ್ವತಾರೋಹಣದ ವೇಳೆ ಸಾವನ್ನಪ್ಪಿದವರಲ್ಲಿ ಅಯ್ಯರ್‌ ಮೂರನೆಯವರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.