ADVERTISEMENT

ಹೈದರಾಬಾದ್‌ನ ದಂತ ವೈದ್ಯ ಸಾವು

ಷಿಕಾಗೋದಲ್ಲಿ ರಸ್ತೆ ಅಪಘಾತ

ಪಿಟಿಐ
Published 1 ಏಪ್ರಿಲ್ 2019, 0:28 IST
Last Updated 1 ಏಪ್ರಿಲ್ 2019, 0:28 IST

ವಾಷಿಂಗ್ಟನ್‌: ಷಿಕಾಗೋದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಭಾರತದ ದಂತ ವೈದ್ಯ ಸಹಿತ ಇಬ್ಬರು ಮೃತಪಟ್ಟಿದ್ದಾರೆ.

ದಂತವೈದ್ಯ ಹೈದರಾಬಾದ್‌ನ ಡಾ.ಅರ್ಶದ್‌ ಮೊಹಮದ್‌ (32) ಮೃತಪಟ್ಟವರು. ಗುರುವಾರ ರಾತ್ರಿ ಅವರು ಪ್ರಯಾಣಿಸುತ್ತಿದ್ದ ಹೊಂಡಾ ಕಾರಿಗೆ ಏಕಪಥದ ವಿರುದ್ಧ ದಿಕ್ಕಿನಲ್ಲಿ ಬಂದ ವೋಕ್ಸ್‌ ವ್ಯಾಗನ್‌ ಡಿಕ್ಕಿ ಹೊಡೆದಿದೆ.

ವೆಟರನ್ಸ್‌ ಮೆಮೊರಿಯಲ್‌ ಟೋಲ್‌ವೇ ಬಳಿ ಈ ಅಪಘಾತ ಸಂಭವಿಸಿದೆ. ವೋಕ್ಸ್‌ವ್ಯಾಗನ್‌ ಕಾರು ಚಾಲಕ ರಾಬರ್ಟ್‌ ವೆಲೆಝ್ಪಕೋ ಹ್ಯಾಮಂಡ್‌ (36) ಕೂಡಾ ಮೃತಪಟ್ಟಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.