ನ್ಯೂಯಾರ್ಕ್: ಚಂದಿರನ ದಕ್ಷಿಣ ಧ್ರುವದ ಅಂಗಳದಲ್ಲಿ ಲ್ಯಾಂಡರ್ ಘಟಕವನ್ನು ಯಶಸ್ವಿಯಾಗಿ ಇಳಿಸಿರುವ ಇಸ್ರೊ ಸಾಧನೆಯು ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವು ಜಾಗತಿಕ ನಾಯಕನಾಗಿ ಹೊರಹೊಮ್ಮುವಂತೆ ಮಾಡಿದೆ ಎಂದು ಇಲ್ಲಿನ ಭಾರತೀಯ ಸಮುದಾಯ ಬುಧವಾರ ಹೇಳಿದೆ.
‘ಭೌತವಿಜ್ಞಾನ ಹಾಗೂ ಖಗೋಳವಿಜ್ಞಾನ ಅಧ್ಯಯನ ಕೈಗೊಳ್ಳಲು ಲಕ್ಷಾಂತರ ಮಕ್ಕಳಿಗೆ ಭಾರತದ ಈ ಸಾಧನೆಯು ಪ್ರೇರಣೆಯಾಗಲಿದೆ’ ಎಂದು ಅಭಿಮಾನ ವ್ಯಕ್ತಪಡಿಸಿದ್ದಾರೆ.
‘ಚಂದ್ರಯಾನ–3 ಕಾರ್ಯಕ್ರಮದ ಸಾಧನೆಯಿಂದ ನಾನು ರೋಮಾಂಚನಗೊಂಡಿರುವೆ. ಇದು ಇಸ್ರೊ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಲಿದೆ’ ಎಂದು ನ್ಯೂಯಾರ್ಕ್ ಮೂಲದ ವರ್ತಕ ಹಾಗೂ ಭೌತವಿಜ್ಞಾನದಲ್ಲಿ ಆಸಕ್ತಿ ಹೊಂದಿರುವ ಸಂದೀಪ್ ಡಾಗಾ ಹೇಳಿದ್ದಾರೆ.
ಅಮೆರಿಕದಲ್ಲಿರುವ ಭಾರತೀಯರು ಕೂಡ ‘ಚಂದ್ರಯಾನ–3’ರ ಯಶಸ್ಸಿಗೆ ಪ್ರಾರ್ಥನೆ–ಪೂಜೆ ಸಲ್ಲಿಸಿದ್ದಾರೆ.
ಭಾರತೀಯ ಸಂಘಗಳ ಒಕ್ಕೂಟದ (ಎಫ್‌ಐಎ) ಅಧ್ಯಕ್ಷ ಅಲೋಕ್ ಕುಮಾರ್ ಅವರು ನ್ಯೂಜೆರ್ಸಿಯಲ್ಲಿರುವ ಓಂ ಶ್ರೀ ಸಾಯಿ ಬಾಲಾಜಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.