ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ (ಯುಎಇ) ನೆಲೆಸಿರುವ ಭಾರತ ಮೂಲದ ಚಾಲಕ ಅಜಯ್ ಒಗುಲಾ (31) ಅವರು ₹33 ಕೋಟಿ (15 ದಶಲಕ್ಷ ದಿರ್ಹಾಮ್ಸ್) ಮೊತ್ತದ ಲಾಟರಿ ಜಯಿಸಿದ್ದಾರೆ.
ಆಭರಣ ಸಂಸ್ಥೆಯೊಂದರಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿರುವ ಅಜಯ್ ಅವರು ಇದೇ ಮೊದಲ ಬಾರಿಗೆ ಎರಡು ಲಾಟರಿ ಟಿಕೆಟ್ ಖರೀದಿಸಿದ್ದರು. ಅವರು ಈ ಹಣದಲ್ಲಿ ಮನೆಯೊಂದನ್ನು ಕಟ್ಟಿಸಿ, ನಿರ್ಮಾಣ ಕಂಪನಿಯೊಂದನ್ನು ಸ್ಥಾಪಿಸುವ ಗುರಿ ಹೊಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.