ADVERTISEMENT

ಉಕ್ರೇನ್‌ನಿಂದ ವಿಶೇಷ ವಿಮಾನಗಳ ಹಾರಾಟ ರದ್ದು: ಭಾರತೀಯ ರಾಯಭಾರಿ ಕಚೇರಿ

ರಾಯಿಟರ್ಸ್
Published 24 ಫೆಬ್ರುವರಿ 2022, 12:27 IST
Last Updated 24 ಫೆಬ್ರುವರಿ 2022, 12:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಉಕ್ರೇನ್ ವಾಯುಪ್ರದೇಶ ಸಂಪೂರ್ಣವಾಗಿ ಮುಚ್ಚಿರುವ ಹಿನ್ನೆಲೆಯಲ್ಲಿ ಕೀವ್‌ಗೆ ವಿಶೇಷ ವಿಮಾನಗಳ ಹಾರಾಟವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ ಎಂದು ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ತಿಳಿಸಿದೆ.

ಯುದ್ಧ ಪರಿಸ್ಥಿತಿ ನೆಲೆಗೊಂಡಿರುವ ಉಕ್ರೇನ್‌ನಿಂದ ವಿದ್ಯಾರ್ಥಿಗಳು ಸೇರಿದಂತೆ ಭಾರತೀಯ ನಾಗರಿಕರನ್ನು ಸ್ಥಳಾಂತರಿಸಲು ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ರಾಯಭಾರಿ ಕಚೇರಿಯು ಟ್ವೀಟ್ ಮೂಲಕ ತಿಳಿಸಿದೆ.

ಹೆಚ್ಚುವರಿ ನೆರವಿಗಾಗಿ 24*7 ಸಹಾಯವಾಣಿ ಸಂಖ್ಯೆಯನ್ನು ತೆರೆಯಲಾಗಿದೆ.

ಅಮೆರಿಕ ಹಾಗೂ ಯುರೋಪ್ ಮಿತ್ರರಾಷ್ಟ್ರಗಳ ತೀವ್ರ ವಿರೋಧದ ನಡುವೆಯು ಉಕ್ರೇನ್ ಮೇಲೆ ಯುದ್ಧ ಘೋಷಣೆ ಮಾಡಿರುವ ರಷ್ಯಾ, ಗುರುವಾರ ಮಿಲಿಟರಿ ಕಾರ್ಯಾಚರಣೆಯನ್ನು ಆರಂಭಿಸಿದೆ.

ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ 24*7 ಸಹಾಯವಾಣಿ ಸಂಖ್ಯೆಗಳು:
+38 0997300428
+38 0997300483
+38 0933980327
+38 0635917881
+38 0935046170

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.