ವಾಷಿಂಗ್ಟನ್ : ಸಾಗರೋತ್ತರ ಭಾರತೀಯ ಪೌರತ್ವ(ಒಸಿಐ) ಕಾರ್ಡ್‌ನಲ್ಲಿರುವ ಲೋಪದೋಷ
ಗಳನ್ನು ಭಾರತ ಸರ್ಕಾರ ಶೀಘ್ರ ಸರಿಪಡಿಸಬೇಕು ಎಂದು ಅಮೆರಿಕದಲ್ಲಿರುವ ಜೈಪುರ ಮೂಲದ ಜನರ
ಸಂಘಟನೆ ಮುಖ್ಯಸ್ಥ ಪ್ರೇಮ್ ಭಂಡಾರಿ ಆಗ್ರಹಿಸಿದ್ದಾರೆ.
‘ಅಮೆರಿಕದಿಂದ ಭಾರತಕ್ಕೆ ಬರುವ ಭಾರತೀಯ ಸಂಜಾತರು ವಿಮಾನ ನಿಲ್ದಾಣಗಳಲ್ಲಿ ಸಮಸ್ಯೆ ಅನುಭವಿಸುತ್ತಿದ್ದು, ಒಸಿಐ ಅನ್ನು ‘ಶಾಶ್ವತ ವೀಸಾ’ ಎಂದು ಪರಿಗಣಿಸಬಾರದು’ ಎಂದು ಆಗ್ರಹಿಸಿದ್ದಾರೆ.
ಪ್ರಸ್ತುತ ಭಾರತೀಯ ಸಂಜಾತರು ಭಾರತಕ್ಕೆ ಬರುವಾಗ ವಿಮಾನ ನಿಲ್ದಾಣಗಳಲ್ಲಿ ಪಾಸ್‌ಪೋರ್ಟ್ ಜೊತೆಗೆ ಒಸಿಐ ಕಾರ್ಡ್ ತೋರಿಸುತ್ತಾರೆ. ಒಸಿಐ ಕಾರ್ಡ್ ಅನ್ನೇಶಾಶ್ವತ ವೀಸಾ ಎಂದು ಪರಿಗಣಿಸಲಾಗಿದೆ.
20 ವರ್ಷ ಕೆಳಗಿನವರು ಹಾಗೂ 50 ವರ್ಷ ಮೇಲ್ಪಟ್ಟವರು ತಮ್ಮಪಾಸ್‌ಪೋರ್ಟ್ ನವೀಕರಿಸುವ
ಸಂದರ್ಭದಲ್ಲಿ ಒಸಿಐ ಕಾರ್ಡ್‌ಅನ್ನೂ ನವೀಕರಿಸಬೇಕು.
ಹಿಂದಿನಿಂದಲೂ ಈ ನಿಯಮ ವಿದ್ದರೂ, ಯಾರೂ ಗಂಭೀರವಾಗಿ ಪಾಲಿಸಿರಲಿಲ್ಲ. ಇತ್ತೀಚೆಗೆ ಈ ನಿಯಮವನ್ನು ಕಡ್ಡಾಯಗೊಳಿಸಲಾಗಿತ್ತು. ಜನರಿಗೆ ಅನನುಕೂಲವಾಗದಂತೆ 2020 ಜೂನ್ 30ರವರೆಗೆ ನಿಯಮವನ್ನು ಸಡಿಲಗೊಳಿಸಲಾಗಿತ್ತು. ಆದರೆಒಸಿಐ ಕಾರ್ಡ್ ಹೊಂದಿದವರು ಪ್ರಯಾಣದ ವೇಳೆ ಹಳೇ ಪಾಸ್‌ಪೋರ್ಟ್ ಅನ್ನೂ ತೆಗೆದುಕೊಂಡು ಹೋಗಬೇಕು ಎಂದು ಸೂಚಿಸಲಾಗುತ್ತಿದೆ. ಈ ಕುರಿತು ಮಾಹಿತಿ ಇಲ್ಲದ ಪ್ರಯಾಣಿಕರು ತೊಂದರೆಗೆಸಿಲುಕುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.