ಕಠ್ಮಂಡು: ಅನ್ನಪೂರ್ಣ ಪರ್ವತದ ತುದಿಯಿಂದ ವಾಪಸಾಗುವ ವೇಳೆ ಭಾರತೀಯ ಮಹಿಳಾ ಪರ್ವತಾರೋಹಿ ಬಲ್‌ಜೀತ್ ಕೌರ್ (27) ಅವರು 4ನೇ ಶಿಬಿರದ ಸಮೀಪ ಕಾಣೆಯಾಗಿದ್ದಾರೆ ಎಂದು ಯಾತ್ರೆಯ ಆಯೋಜಕರು ಮಂಗಳವಾರ ತಿಳಿಸಿದ್ದಾರೆ.
‘ಬಲ್‌ಜೀತ್ ಅವರ ಪತ್ತೆಗೆ ಮೂರು ಹೆಲಿಕಾಪ್ಟರ್‌ಗಳನ್ನು ಕಳುಹಿಸಲಾಗಿದೆ. ಪೂರಕ ಆಮ್ಲಜನಕ ವ್ಯವಸ್ಥೆಯೂ ಅವರ ಬಳಿಯಿಲ್ಲ, ಅವರಿಗೆ ಏನಾಗಿರಬಹುದು ಎಂದು ಹೇಳಲು ಸಾಧ್ಯವಿಲ್ಲ‘ ಎಂದು ಪಿಯೋನರ್ ಅಡ್ವೆಂಚರ್ ಸಂಸ್ಥೆಯ ಮುಖ್ಯಸ್ಥ ಪಸಂಗ್ ಶೆರ್ಪಾ ಹೇಳಿದ್ದಾರೆ.
ಸೋಮವಾರವಷ್ಟೇ ಆರು ಸಾವಿರ ಮೀಟರ್ ಎತ್ತರದಿಂದ ಬಿದ್ದು ರಾಜಸ್ಥಾನ ಮೂಲದ ಪರ್ವತಾರೋಹಿ ಅನುರಾಗ್ ಮಲು ಅವರು ಸಾವನ್ನಪ್ಪಿದ್ದರು. ಘಟನೆ ನಡೆದು ಒಂದು ದಿನದ ಬಳಿಕ ಬಲ್‌ಜೀತ್ ಕಾಣೆಯಾಗಿದ್ದಾರೆ ಎಂದು ಹಿಮಾಲಯನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.