ವಾಷಿಂಗ್ಟನ್: ವಿಮಾನಯಾನದ ಸರಕುಗಳನ್ನು ರಷ್ಯಾಗೆ ಅಕ್ರಮವಾಗಿ ಪೂರೈಕೆ ಮಾಡಿದ ಆರೋಪದ ಮೇಲೆ ಭಾರತ ಮೂಲದ ವ್ಯಕ್ತಿಯೊಬ್ಬರನ್ನು ಅಮೆರಿಕದಲ್ಲಿ ಬಂಧಿಸಲಾಗಿದೆ.
ಸಂಜಯ್ ಕೌಶಿಕ್ ಬಂಧಿತ ವ್ಯಕ್ತಿ. ದೆಹಲಿ ಮೂಲದ ಏರ್ ಚಾರ್ಟರ್ ಸರ್ವೀಸ್ ಒದಗಿಸುವ ಸಂಸ್ಥೆ ಅರೆಜೊ ಏವಿಯೇಷನ್‌ನಲ್ಲಿ ವ್ಯವಸ್ಥಾಪಕ ಪಾಲುದಾರರಾಗಿ ಇವರು ಕೆಲಸ ಮಾಡುತ್ತಿದ್ದರು.
ಭಾರತಕ್ಕೆ ಅಧಿಕೃತ ಪ್ರವಾಸಕ್ಕೆ ಬಂದು ವಾಪಸಾದ ನಂತರ ಅಕ್ಟೋಬರ್ 17ರಂದು ಮಿಯಾಮಿಯಲ್ಲಿ ಬಂಧಿಸಲಾಗಿದೆ ಎಂದು ನ್ಯಾಯಾಂಗ ಇಲಾಖೆ ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದೆ.
‘ಕೌಶಿಕ್ ಅವರು ಅಮೆರಿಕದಿಂದ ವಿಮಾನಯಾನಕ್ಕೆ ಸಂಬಂಧಿಸಿದ ಸರಕುಗಳು ಮತ್ತು ತಂತ್ರಜ್ಞಾನವನ್ನು ರಷ್ಯಾದ ಸಂಸ್ಥೆಗಳಿಗೆ ಅಕ್ರಮವಾಗಿ ಪೂರೈಕೆ ಮಾಡುತ್ತಿದ್ದರು’ ಎಂದು ಫೆಡರಲ್ ಪ್ರಾಸಿಕ್ಯೂಟರ್ ಕೋರ್ಟ್‌ಗೆ ತಿಳಿಸಿದ್ದಾರೆ.
ಕೌಶಿಕ್ ಅವರ ಮೇಲಿನ ಆರೋಪ ದೃಢಪಟ್ಟು ಅವರು ದೋಷಿ ಎಂದು ಸಾಬೀತಾದಲ್ಲಿ, ಅವರಿಗೆ ಗರಿಷ್ಠ 20 ವರ್ಷ ಜೈಲು ಶಿಕ್ಷೆ ಮತ್ತು 10 ಲಕ್ಷ ಡಾಲರ್ ದಂಡ ವಿಧಿಸಬಹುದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.