ವಾಷಿಂಗ್ಟನ್ : ಆರೋಗ್ಯ ಕ್ಷೇತ್ರದಲ್ಲಿ ವಂಚನೆ ನಡೆಸಿರುವ ಪ್ರಕರಣದಲ್ಲಿ ಭಾರತದ ಯೋಗೇಶ್ ಪಂಚೋಲಿ ಎನ್ನುವವರನ್ನು ಮಿಷಿಗನ್‌ನ ನ್ಯಾಯಾಲಯವು ದೋಷಿ ಎಂದು ಘೋಷಿಸಿದೆ.
ಯೋಗೇಶ್ ಅವರು ಇತರರ ಹೆಸರು, ಸಹಿ ಮತ್ತು ಖಾಸಗಿ ಮಾಹಿತಿಯನ್ನು ಬಳಸಿಕೊಂಡು ‘ಶ್ರಿಂಗ್ ಹೋಮ್ ಕೇರ್’ ಕಂಪನಿಯನ್ನು ಖರೀದಿಸಿದ್ದಾರೆ. ಈ ಕಂಪನಿಯು ತಮ್ಮ ಒಡೆತನದಲ್ಲಿರುವುದನ್ನು ಮರೆಮಾಚಲು ಅವರು ಇತರರ ಮಾಹಿತಿಯನ್ನು ಬಳಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಯೋಗೇಶ್ ಮತ್ತು ಇತರರು ಸೇರಿ, ತಮ್ಮ ಕಂಪನಿಯಿಂದ ಸೇವೆ ಒದಗಿಸದೆಯೇ ಎರಡು ತಿಂಗಳ ಅವಧಿಯಲ್ಲಿ 2.8 ಮಿಲಿಯನ್ ಅಮೆರಿಕ ಡಾಲರ್‌ನ (ಅಂದಾಜು ₹23.28 ಕೋಟಿ) ಬಿಲ್ ನೀಡಿ ವಂಚಿಸಿದ್ದಾರೆ ಎಂದೂ ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.