ಸಿಂಗಪುರ: ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಭಾರತೀಯ ಮೂಲದ ವ್ಯಕ್ತಿ ಸೇರಿದಂತೆ ಇಬ್ಬರು ಮೃತರಾಗಿದ್ದಾರೆ.
ತಮಿಳುನಾಡಿದ ಸುಲ್ತಾನ್ ಅಬ್ದುಲ್ ಕತಾರ್ ರೆಹಮಾನ್ (33), ಮಹಮ್ಮದ್ ಆರ್ಬಿಕ್ ಮೊಹಮ್ಮದ್ ಫಾರೂಕ್ (27) ಮೃತರಾದವರು. ಇವರಿಬ್ಬರು ರೆಸ್ಟೊರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದರು.ಮಹಮ್ಮದ್ ಆರ್ಬಿಕ್ ಮಲೇಷ್ಯಾದವರು.
ಕಾರು ಚಾಲಕ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎನ್ನಲಾಗಿದ್ದು, ಆತನನ್ನು ಬಂಧಿಲಾಗಿದೆ. ಸುಲ್ತಾನ್ ಅವರಿಗೆ ಪತ್ನಿ ಮತ್ತು ಎರಡು ವರ್ಷದ ಮಗಳಿದ್ದಾಳೆ. ಅವರು ನಾಲ್ಕು ವರ್ಷಗಳಿಂದ ಸಿಂಗಪುರದಲ್ಲಿ ನೆಲೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.