ADVERTISEMENT

ಭಾರತ– ಸಿಂಗಪುರ ಜಂಟಿ ಸಮರಾಭ್ಯಾಸಕ್ಕೆ ನಿರ್ಧಾರ

ಪಿಟಿಐ
Published 8 ಮೇ 2024, 13:23 IST
Last Updated 8 ಮೇ 2024, 13:23 IST
ನೌಕಾಪಡೆ ಸಮರಾಭ್ಯಾಸ: ಸಂಗ್ರಹ ಚಿತ್ರ 
ನೌಕಾಪಡೆ ಸಮರಾಭ್ಯಾಸ: ಸಂಗ್ರಹ ಚಿತ್ರ    

ಸಿಂಗಪುರ: ಭಾರತೀಯ ನೌಕಾಪಡೆಯು ಸಿಂಗಪುರ ನೌಕಾಪಡೆಯೊಂದಿಗೆ ವಿಶಾಖಪಟ್ಟಣದಲ್ಲಿ ಜಂಟಿ ಸಮರಾಭ್ಯಾಸ ನಡೆಸಲಿದೆ.

ಜಂಟಿ ನೌಕಾ ಸಮರಾಭ್ಯಾಸ ನಡೆಸುವ ಮೂಲಕ ಪ‍ರಸ್ಪರ ದೇಶಗಳ ಕಾರ್ಯಾಚರಣೆಯ ತತ್ವವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲಿದೆ. ಸಿಂಗಪುರ ಜೊತೆಗಿನ ಕಾರ್ಯಾಚರಣೆ ವಿಸ್ತರಿಸುವ ನಡೆಯೂ ಇದಾಗಿದೆ ಎಂದು ಪೂರ್ವ ಕಮಾಂಡಿಂಗ್‌ನ ಫ್ಲ್ಯಾಗ್‌ ಆಫೀಸರ್‌ ರಾಜೇಶ್ ಧನಖಡ್ ತಿಳಿಸಿದ್ದಾರೆ.  

ಮಂಗಳವಾರ ಚಾಂಗಿ ನೌಕಾನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಐಎನ್‌ಎಸ್ ಶಕ್ತಿ’ ಹಡಗಿನಲ್ಲಿ ಸಿಂಗಪುರ ರಕ್ಷಣಾ ವಲಯದ 150 ಜನ ಅತಿಥಿಗಳು, ರಾಜತಾಂತ್ರಿಕ ನಿಯೋಗಗಳ ಮುಖ್ಯಸ್ಥರು ಮತ್ತು ಭಾರತೀಯ ವಲಸೆಗಾರರನ್ನು ಉದ್ದೇಶಿಸಿ ಅವರು ಮಾತನಾಡಿದರು. 

ADVERTISEMENT

ಸಿಂಗಪುರ– ಭಾರತ ಜಂಟಿ ನೌಕಾ ಸಮರಾಭ್ಯಾಸ ನಡೆಸಲು ಹೊರಟಿರುವುದು ಇದು 31ನೇ ಬಾರಿ. ಈ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ವಿಶಾಖಪಟ್ಟಣದಲ್ಲಿ ಈ ಸಮರಾಭ್ಯಾಸ ನಡೆಯಲಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.