ADVERTISEMENT

ಲಂಡನ್‌ | ಮೇಯರ್‌ ಚುನಾವಣೆ: ಇಬ್ಬರು ಭಾರತೀಯರು ಸೆಣಸು

ಪಿಟಿಐ
Published 9 ಏಪ್ರಿಲ್ 2023, 14:29 IST
Last Updated 9 ಏಪ್ರಿಲ್ 2023, 14:29 IST

ಲಂಡನ್‌: ಯುರೋಪ್‌ನ ಲೈಸಿಸ್ಟರ್‌ ನಗರದ ಮೇಯರ್‌ ಹುದ್ದೆಗೆ ಇಬ್ಬರು ಭಾರತೀಯ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಚುನಾವಣೆಯು ಮೇ 4ರಂದು ನಡೆಯಲಿದೆ. ಕನ್ಸರ್ವೇಟಿವ್‌ ಪಕ್ಷದ ಕೌನ್ಸಿಲರ್‌ ಸಂಜಯ್‌ ಮೋಡ್‌ವಾಡಿಯಾ ಹಾಗೂ ಲೇಬರ್‌ ಪಕ್ಷದ ಮಾಜಿ ಕೌನ್ಸಿಲರ್‌ ರಿಟಾ ಪಟೇಲ್‌ ಚುನಾವಣೆಯಲ್ಲಿ ಸೆಣಸಲಿದ್ದಾರೆ.

ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ರಿಟಾ ಪಟೇಲ್‌ ಅವರು, ‘ನಗರಕ್ಕೆ ‘ಹೊಸ ಆರಂಭ’ಬೇಕಿದೆ. ಮೇಯರ್‌ ಆಗಿ ಆಯ್ಕೆ ಆದ ಬಳಿಕ ಮೊದಲು ಮೇಯರ್‌ ಹುದ್ದೆಯನ್ನು ರದ್ದು ಮಾಡುತ್ತೇನೆ’ ಎಂದು ತಮ್ಮ ಪ್ರಚಾರ ಭಾಷಣಗಳಲ್ಲಿ ಹೇಳುತ್ತಿದ್ದಾರೆ.

ಕಳೆದ ತಿಂಗಳು ನಡೆದ ಕೌನ್ಸಿಲರ್‌ ಸಭೆಯಲ್ಲಿ ಮೇಯರ್‌ ಹುದ್ದೆಯನ್ನು ರದ್ದು ಮಾಡುವ ಸಂಬಂಧ ಮತಕ್ಕೆ ಹಾಕುವ ಪ್ರಯತ್ನ ನಡೆಸಿದ್ದಕ್ಕಾಗಿ ಲೇಬರ್‌ ಪಕ್ಷವು ರಿಟಾ ಪಟೇಲ್‌ ಸೇರಿದಂತೆ ನಾಲ್ವರು ಕೌನ್ಸಿಲರ್‌ಗಳನ್ನು ಆರು ತಿಂಗಳುಗಳಿಗೆ ಅಮಾನತು ಮಾಡಿತ್ತು.

ADVERTISEMENT

‘ಮೇಡ್‌ ಇನ್‌ ಲೈಸಿಸ್ಟರ್‌’ ಎನ್ನುವ ಬ್ರ್ಯಾಂಡ್‌ಅನ್ನು ಸ್ಥಾಪಿಸಿ, ಜಗತ್ತಿನಲ್ಲಿ ನಗರದ ಖ್ಯಾತಿಯನ್ನು ಹೆಚ್ಚಿಸುತ್ತೇನೆ’ ಎಂದು ಉದ್ಯಮಿಯೂ ಆಗಿರುವ ಮೋಡ್‌ವಾಡಿಯಾ ಅವರು ತಮ್ಮ ಪ್ರಚಾರ ಭಾಷಣದಲ್ಲಿ ಭರವಸೆ ನೀಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.