ಲಂಡನ್: ರಾಣಿ ಎರಡನೇ ಎಲಿಜಬೆತ್ ಅವರ ಮೊದಲ ವರ್ಷದ ಜಯಂತಿಯ ಅಂಗವಾಗಿ ಲಕ್ಸುರಿ ಉತ್ಪನ್ನಗಳ ತಯಾರಿಕಾ ಸಂಸ್ಥೆಯಾದ ಈಸ್ಟ್ ಇಂಡಿಯಾ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಭಾರತ ಮೂಲದ ಸಂಜೀವ್ ಮೆಹ್ತಾ ಅವರು ₹191 ಕೋಟಿ ಮೌಲ್ಯದ ಚಿನ್ನ ಮತ್ತು ವಜ್ರ ಖಚಿತ ನಾಣ್ಯವನ್ನು ಬಿಡುಗಡೆ ಮಾಡಿದರು.
ಇದರಲ್ಲಿ ಆಯ್ದ ಮತ್ತು ಬೆಲೆ ಬಾಳುವ 6,426 ವಜ್ರಗಳಿವೆ ಹಾಗೂ 24 ಕ್ಯಾರಟ್ ಚಿನ್ನದ 11 ನಾಣ್ಯಗಳಿವೆ. ಭಾರತ, ಸಿಂಗಪುರ, ಜರ್ಮನಿ, ಬ್ರಿಟನ್ ಮತ್ತು ಶ್ರೀಲಂಕಾದ ಕುಶಲಕರ್ಮಿಗಳು ಈ ನಾಣ್ಯವನ್ನು ರೂಪಿಸಿದ್ದಾರೆ
ಈಸ್ಟ್ ಇಂಡಿಯಾ ಕಂಪನಿಯು ಬ್ರಿಟನ್‌ನಲ್ಲಿ ಮುಖ್ಯಕಚೇರಿ ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.