ವಾಷಿಂಗ್ಟನ್ : ಮರ್ಸಿಡಿಸ್ ಕಾರು ಕದಿಯುವ ಯತ್ನದಲ್ಲಿ ಕಾರುಗಳ್ಳರ ಗುಂಪೊಂದು 33 ವರ್ಷದ ಭಾರತೀಯ ಮೂಲದ ವೈದ್ಯರೊಬ್ಬರ ಹತ್ಯೆ ನಡೆಸಿದೆ ಎಂದು ಅಮೆರಿಕ ಮಾಧ್ಯಮಗಳು ವರದಿ ಮಾಡಿವೆ.
ಈ ಭಯಾನಕ ದೃಶ್ಯಕ್ಕೆ ವೈದ್ಯರ ಗೆಳತಿಯು ಮೂಕ ಪ್ರೇಕ್ಷಕರಾಗಿದ್ದರು ಎಂದೂ ಹೇಳಿವೆ.
ಸಿಲ್ವರ್ ಸ್ಪ್ರಿಂಗ್ ಮೇರಿಲ್ಯಾಂಡ್‌ನ ನಿವಾಸಿ ಡಾ.ರಾಕೇಶ್ ರಿಕ್ ಪಟೇಲ್ ಅವರು ಬುಧವಾರ ತಮ್ಮ ಗೆಳತಿಗೆ ಉಡುಗೊರೆಯೊಂದನ್ನು ನೀಡಲು ತಮ್ಮ ಮರ್ಸಿಡಿಸ್ ಬೆನ್ಜ್ ಕಾರಿನಿಂದ ಕೆಳಗಿಳಿದಿದ್ದಾರೆ. ಈ ಅವಕಾಶಕ್ಕಾಗಿ ಕಾಯುತ್ತಿದ್ದ ಕಾರುಗಳ್ಳರ ಗುಂಪೊಂದು ಕಾರಿನೊಳಗೆ ನುಗ್ಗಿ ಚಾಲನೆ ಮಾಡಿದೆ.
ಇದನ್ನು ಕಂಡು ಕಾರಿನ ಹಿಂದೆ ಓಡಿ ಬಂದ ರಾಕೇಶ್ ಕಾರಿನ ಮುಂದೆ ಬಂದು ನಿಂತರು. ಆದರೆ ದುಷ್ಕರ್ಮಿಗಳು ರಾಕೇಶ್ ಮೇಲೆ ಕಾರು ಹರಿಸಿ ಪರಾರಿಯಾಗಿದೆ. ಉಡುಗೊರೆ ಸ್ವೀಕರಿಸಬೇಕಿದ್ದ ಗೆಳತಿಯು ಭಯಾನಕ ದೃಶ್ಯಕ್ಕೆ ಸಾಕ್ಷಿಯಾದರು ಎಂದು ‘7 ನ್ಯೂಸ್’ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.