ಲಂಡನ್: ತನ್ನ 30 ವರ್ಷದ ಪತ್ನಿ, ಎಂಟು ವರ್ಷದ ಮಗಳು ಹಾಗೂ 2 ವರ್ಷದ ಮಗನನ್ನು ಕೊಲ್ಲಲು ಯತ್ನಿಸಿದ ಆರೋಪದ ಮೇಲೆ ಭಾರತೀಯ ಮೂಲದ ವ್ಯಕ್ತಿಯನ್ನು ಲಂಡನ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಕುಲ್ವಿಂದರ್ ರಾಮ್ ಎಂದು ಗುರುತಿಸಲಾಗಿದೆ.
ಲಂಡನ್ನ ಬಾರ್ಕಿಂಗ್ಸೈಡ್ನಲ್ಲಿ ತನ್ನ ಕುಟುಂಬದೊಂದಿಗೆ ನೆಲೆಸಿದ್ದ ಕುಲ್ವಿಂದರ್ ರಾಮ್ ಅ.20 ರಂದು ಕೌಟುಂಬಿಕ ಕಾರಣಗಳಿಂದ ಪತ್ನಿ, ಮಗ, ಮಗಳ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದ. ಬಳಿಕ ತಾನು ಕೈ ಕೋಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ.
ಕೂಡಲೇ ಸ್ಥಳಕ್ಕೆ ದೌಡಾಯಿಸಿದ್ದ ಲಂಡನ್ ಪೊಲೀಸರು ಗಾಯಗೊಂಡವನ್ನು ಆಸ್ಪತ್ರೆಗೆ ದಾಖಲಿಸಿದ್ದರು.
ಚಿಕಿತ್ಸೆ ಪಡೆದುಕೊಂಡಿರುವ ನಾಲ್ವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೊಲೆ ಯತ್ನ ಆರೋಪದ ಮೇಲೆ ಆಸ್ಪತ್ರೆಯಲ್ಲಿದ್ದ ಕುಲ್ವಿಂದರ್ ರಾಮ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ವಿಚಾರಣೆ ನಡೆಸುತ್ತಿರುವ ಬಾರ್ಕಿಂಗ್ಸೈಡ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಕುಲ್ವಿಂದರ್ ರಾಮ್ ಮೇಲಿನ ವಿಚಾರಣೆಯನ್ನು ಮುಂದೂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.