ADVERTISEMENT

ಪೂರಕ ಪೋಷಕಾಂಶಗಳ ಮೋಸದ ಮಾರಾಟ: ಭಾರತೀಯ ಮೂಲದ ಉದ್ಯಮಿಗೆ ಜೈಲು

ಪಿಟಿಐ
Published 20 ಫೆಬ್ರುವರಿ 2021, 7:19 IST
Last Updated 20 ಫೆಬ್ರುವರಿ 2021, 7:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್‌: ತೂಕ ಕಡಿಮೆ ಮಾಡುವ ಹಾಗೂ ಇತರೆ ವ್ಯಾಯಾಮ ಮಾಡುವವರಿಗೆ ಪೂರಕವಾಗಿ ನೀಡುವ ಜನಪ್ರಿಯ ಪೋಷಕಾಂಶಯುಕ್ತ ಪುಡಿಯನ್ನು, ಅದರಲ್ಲಿರುವ ಮೂಲ ಪದಾರ್ಥಗಳನ್ನು ಮರೆಮಾಚಿ ಮೋಸದಿಂದ ಮಾರಾಟ ಮಾಡಿರುವ ಆರೋಪದ ಮೇಲೆ ಕಂಪನಿಯೊಂದರ, ಭಾರತೀಯ ಮೂಲದ ಮಾಜಿ ಕಾರ್ಯ ನಿರ್ವಾಹಕರೊಬ್ಬರಿಗೆ ಅಮೆರಿಕ ನ್ಯಾಯಾಲಯ 41 ತಿಂಗಳ ಸೆರೆವಾಸ ಶಿಕ್ಷೆ ವಿಧಿಸಿದೆ.

ಎಸ್‌.ಕೆ.ಲಾಬೊರೇಟರಿಸ್‌ನ ಮಾಜಿ ಉಪಾಧ್ಯಕ್ಷ ಸಿತೇಶ್ ಪಟೇಲ್‌ ಶಿಕ್ಷೆಗೆ ಗುರಿಯಾದವರು. ಅಮೆರಿಕದ ಟೆಕ್ಸಾಸ್‌ನಲ್ಲಿರುವ ಫೆಡರಲ್ ನ್ಯಾಯಾಲಯ ಈ ಶಿಕ್ಷೆ ವಿಧಿಸಿದೆ.

ನ್ಯಾಯಾಲಯಕ್ಕೆ ಸಲ್ಲಿಸಿದ ದಾಖಲೆ ಪ್ರಕಾರ, ಕ್ಯಾಲಿಫೋರ್ನಿಯಾದ ಇರ್ವಿನ್‌ ನಿವಾಸಿ ಪಟೇಲ್ ಅವರು, ತೂಕ ಇಳಿಸುವ ಹಾಗೂ ಇತರೆ ವ್ಯಾಯಾಮ ಮಾಡುವವರಿಗೆ ಅಗತ್ಯವಾದ ಜನಪ್ರಿಯ ಪೋಷಕಾಂಶ ಪುಡಿಗಳಾದ ‘ಜ್ಯಾಕ್ 3 ಡಿ’ ಮತ್ತು ‘ಆಕ್ಸಿಲೈಟ್ ಪ್ರೊ’ ಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.