ADVERTISEMENT

ಖಾಲಿಸ್ತಾನಿಗಳು ಹಿತ್ತಲಲ್ಲಿರುವ ಹಾವುಗಳು: ಕರ್ನಾಟಕ ಮೂಲದ ಕೆನಡಾ ಸಂಸದ ಚಂದ್ರ ಆರ್ಯ

ಪಿಟಿಐ
Published 5 ಜುಲೈ 2023, 14:34 IST
Last Updated 5 ಜುಲೈ 2023, 14:34 IST
ಚಂದ್ರ ಆರ್ಯ
ಚಂದ್ರ ಆರ್ಯ   

ಟೊರಾಂಟೊ: ‘ನಮ್ಮ ಮನೆ ಹಿತ್ತಲಿನಲ್ಲಿರುವ ಹಾವುಗಳು ತಲೆಯೆತ್ತುತ್ತಿವೆ ಮತ್ತು ಬುಸುಗುಟ್ಟುತ್ತಿವೆ’ ಎಂದು ಭಾರತ ಮೂಲದ ಕೆನಡಾ ಸಂಸದರೊಬ್ಬರು ಖಾಲಿಸ್ತಾನಿ ಸಂಘಟನೆಗಳನ್ನು ಉಲ್ಲೇಖಿಸಿ ಎಚ್ಚರಿಕೆ ನೀಡಿದ್ದಾರೆ.

ಕೆಲ ಹಿರಿಯ ಭಾರತೀಯ ರಾಯಭಾರಿಗಳಿಗೆ ‘ಕೊಲೆಗಡುಕರು’ ಎಂದು ಹಣೆಪಟ್ಟಿ ನೀಡಿ ಕೆನಡಾದ ಖಾಲಿಸ್ತಾನಿ ಸಂಘಟನೆಗಳು ಹೊರಡಿಸಿದ್ದ ಪೋಸ್ಟರ್‌ಅನ್ನು ವಿರೋಧಿಸಿ ಕರ್ನಾಟಕ ಮೂಲದವರಾದ ಚಂದ್ರ ಆರ್ಯ ಅವರು ಹೀಗೆ ಹೇಳಿದ್ದಾರೆ. 

ಜುಲೈ 8ರಂದು ಆಯೋಜಿಸಲಾಗುವುದು ಎನ್ನಲಾಗಿರುವ ‘ಖಾಲಿಸ್ತಾನ ಫ್ರೀಡಂ ರ‍್ಯಾಲಿ’ಗೆ ಸಂಬಂಧಿಸಿದ ಪೋಸ್ಟರನ್ನು ಟ್ವೀಟ್‌ ಮಾಡಿರುವ ಅವರು ‘ಕೆನಡಾದಲ್ಲಿರುವ ಖಾಲಿಸ್ತಾನಿಯರು ಹಿಂಸೆ ಮತ್ತು ದ್ವೇಷಕ್ಕೆ ಉತ್ತೇಜನ ನೀಡುವ ಮೂಲಕ ದೇಶ ನೀಡಿರುವ ಹಕ್ಕುಗಳು ಮತ್ತು ಸ್ವತಂತ್ರವನ್ನು ಮತ್ತಷ್ಟು ಕೆಳಮಟ್ಟಕ್ಕೆ ಕೊಂಡೊಯ್ದರು’ ಎಂದು ಬರೆದಿದ್ದಾರೆ.

ADVERTISEMENT

‘ನಮ್ಮ ಹಿತ್ತಲಿನ ಹಾವುಗಳು ಬುಸುಗುಡುತ್ತಿವೆ. ಅವು ಯಾವ ಸಮಯದಲ್ಲಿ ನಮ್ಮನ್ನು ಕಚ್ಚಿ ಕೊಲ್ಲುತ್ತವೆ ಎಂಬುದಷ್ಟೇ ನಮ್ಮ ಮುಂದಿರುವ ಪ್ರಶ್ನೆ’ ಎಂದು ಹೇಳಿದ್ದಾರೆ.

ಕೆನಡಾ ಆಡಳಿತವು ಇತ್ತೀಚೆಗೆ ಉಗ್ರವಾದಿ ಹರ್‌ದೀಪ್‌ ಸಿಂಗ್‌ ನಿಜ್ಜಾರ್‌ನನ್ನು ಹತ್ಯೆಗೈದಿತ್ತು. ಈ ಸಾವಿಗೆ ಕೆನಡಾದ ಭಾರತೀಯ ರಾಯಭಾರಿಗಳಾದ ಸಂಜಯ್‌ ಕುಮಾರ್‌ ವರ್ಮ, ಅಪೂರ್ವ ಶ್ರೀವಾತ್ಸವ ಅವರೇ ಕಾರಣ ಎಂದು ಬಿಂಬಿಸುವಂಥ ಪೋಸ್ಟರ್‌ಅನ್ನು ಖಾಲಿಸ್ತಾನಿಗಳು ಪ್ರದರ್ಶಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.