ಹ್ಯೂಸ್ಟನ್: ಭಾರತ ಮೂಲದ ಅಮೆರಿಕದ ಪ್ರೊಫೆಸರ್ ಗಣೇಶ್ ಠಾಕೂರ್ ಅವರನ್ನು ಟೆಕ್ಸಾಸ್ ಅಕಾಡೆಮಿ ಆಫ್ ಮೆಡಿಸಿನ್, ಎಂಜಿನಿಯರಿಂಗ್, ಸೈನ್ಸ್ ಆ್ಯಂಡ್ ಟೆಕ್ನಾಲಜಿಯ (ಟಾಮೆಸ್ಟ್) ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಆಧುನಿಕ ಸಂಶೋಧನೆ, ಆವಿಷ್ಕಾರ ಕೈಗೊಳ್ಳಲು ದೇಶದ ಉತ್ತಮ ವಿಜ್ಞಾನಿಗಳನ್ನು, ಸಂಶೋಧಕರನ್ನು ಒಟ್ಟುಗೂಡಿಸುವ ಕೆಲಸವನ್ನು 2004ರಿಂದ ಟಾಮೆಸ್ಟ್ ಮಾಡುತ್ತಿದೆ.
ಜಾರ್ಖಂಡ್ ಮೂಲದ ಠಾಕೂರ್ ಅವರು, ಹ್ಯೂಸ್ಟನ್ ವಿಶ್ವವಿದ್ಯಾಲಯದಲ್ಲಿ ಪೆಟ್ರೊಲಿಯಂ ಎಂಜಿನಿಯರಿಂಗ್ ವಿಭಾಗದಲ್ಲಿ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದಾರೆ. ಠಾಕೂರ್ ಅವರು ಹ್ಯೂಸ್ಟನ್ ವಿಶ್ವವಿದ್ಯಾಲಯದಿಂದ ಟಾಮೆಸ್ಟ್ ಸಂಸ್ಥೆಗೆ ನೇಮಕಗೊಂಡ ಮೊದಲಿಗರಾಗಿದ್ದಾರೆ.
ಬ್ರೆಂಡನ್ ಲೀ ಅವರನ್ನು ಅಧ್ಯಕ್ಷರಾಗಿ ಟಾಮೆಸ್ಟ್‌ನ ನಿರ್ದೇಶಕ ಮಂಡಳಿ ನೇಮಿಸಿದ್ದು, 2025ರ ವೇಳೆಗೆ ಠಾಕೂರ್ ಅವರು ಇದರ ಅಧ್ಯಕ್ಷರಾಗಲಿದ್ದಾರೆ. 2016ರಲ್ಲಿ ಠಾಕೂರ್ ಅವರು ಈ ಸಂಸ್ಥೆಯನ್ನು ಸೇರಿದ್ದು, ಇಲ್ಲಿಯವರೆಗೆ ಸಂಸ್ಥೆಯ ಖಜಾಂಚಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
‘ಜಗತ್ತಿನ ಅದ್ಭುತ ಮನಸ್ಸುಗಳಿಗೆ ಟೆಕ್ಸಾಸ್ ಮನೆಯಂತಿದೆ. ಈ ಅವಕಾಶ ನೀಡಿದ್ದಕ್ಕಾಗಿ ಸಂತೋಷಗೊಂಡಿದ್ದೇನೆ’ ಎಂದು ಗಣೇಶ್ ಠಾಕೂರ್ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.