ADVERTISEMENT

ಅಮೆರಿಕದಲ್ಲಿ ಭಾರತೀಯ ಧಾರ್ಮಿಕ ಮುಖಂಡರಿಂದ ಜಾಗತಿಕ ಶಾಂತಿ ಸಂವಾದ

ಪಿಟಿಐ
Published 3 ಜೂನ್ 2022, 1:58 IST
Last Updated 3 ಜೂನ್ 2022, 1:58 IST
ಆರ್ಟ್‌ ಆಫ್‌ ಲಿವಿಂಗ್‌ ಸ್ಥಾಪಕ ಶ್ರೀ ಶ್ರೀ ರವಿಶಂಕರ್‌
ಆರ್ಟ್‌ ಆಫ್‌ ಲಿವಿಂಗ್‌ ಸ್ಥಾಪಕ ಶ್ರೀ ಶ್ರೀ ರವಿಶಂಕರ್‌   

ವಾಷಿಂಗ್ಟನ್‌: ಜಾಗತಿಕ ಶಾಂತಿ ಮಾತುಕತೆ ನಿಟ್ಟಿನಲ್ಲಿ ಪ್ರಮುಖ ಭಾರತೀಯ ಧಾರ್ಮಿಕ ಮುಖಂಡರ ಗುಂಪು ಜೂನ್‌ 4ರಂದು ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿ ಸಭೆ ಸೇರಲಿದ್ದಾರೆ.

ಪುರಾತನ ಭಾರತೀಯ ಸಂಸ್ಕೃತಿ ಮತ್ತು ನೈತಿಕ ಮೌಲ್ಯಗಳ ಕುರಿತು ವಿಶ್ವದ ಬಿಕ್ಕಟ್ಟುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಈ ಸಭೆಯನ್ನು ಹಮ್ಮಿಕೊಳ್ಳಲಾಗಿದೆ.

ನವದೆಹಲಿ ಮೂಲದ ಅಹಿಂಸಾ ವಿಶ್ವ ಭಾರತಿ ಫೌಂಡೇಷನ್‌ ಜಾಗತಿಕ ಶಾಂತಿ ಸಂವಾದವನ್ನು ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿರುವ ಜೈನ್‌ ಸೆಂಟರ್‌ನಲ್ಲಿ ಆಯೋಜಿಸಿದೆ. ಆರ್ಟ್‌ ಆಫ್‌ ಲಿವಿಂಗ್‌ ಸ್ಥಾಪಕ ಶ್ರೀ ಶ್ರೀ ರವಿಶಂಕರ್‌, ಜೈನ ಮುಖಂಡ ಆಚಾರ್ಯ ಲೋಕೇಶ್‌ ಮುನಿ, ಬಾಲಿವುಡ್‌ ನಟ ವಿವೇಕ್‌ ಒಬೆರಾಯ್‌ ಸೇರಿದಂತೆ ಮತ್ತಿತರರು ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ.

ADVERTISEMENT

ವಿಶ್ವದಲ್ಲಿ ಶಾಂತಿ ಸ್ಥಾಪನೆ ನಿಟ್ಟಿನಲ್ಲಿ ನಾವೆಲ್ಲರೂ ಜೊತೆಯಾಗಿ ಕೆಲಸ ಮಾಡಬೇಕಾದ ತುರ್ತು ಸಮಯ ಇದಾಗಿದೆ. ವಿಶ್ವದ ಪ್ರತಿಯೊಂದು ಯುದ್ಧ ಮತ್ತು ಸಂಘರ್ಷಗಳು ಮಾತುಕತೆಯೊಂದಿಗೆ ಅಂತ್ಯವಾಗುತ್ತವೆ. ಹಾಗಾಗಿ ವಿಶ್ವದಲ್ಲಿ ಯಾವುದೇ ಸಂಘರ್ಷ ಉಲ್ಬಣಗೊಳ್ಳುವ ಮೊದಲೇ ಶಾಂತಿ ಸಂವಾದ ಮೂಲಕ ತಡೆಯಬಹುದು ಎಂದು ಲೋಕೇಶ್‌ ಮುನಿ ಹೇಳಿದ್ದಾರೆ.

ಉಕ್ರೇನ್‌ ಯುದ್ಧ, ಟೆಕ್ಸಾಸ್‌ನ ಶಾಲೆಯಲ್ಲಿ ಶೂಟಿಂಗ್‌ನಂತಹ ಪರಿಸ್ಥಿತಿಗಳು ಬೇಸರವನ್ನು ಮೂಡಿಸಿವೆ. ಇಂತಹ ಕಲುಷಿತ ವಾತಾವರಣವನ್ನು ತಿಳಿಗೊಳಿಸಲು ಪ್ರಯತ್ನಗಳಾಗಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.