ವಾಷಿಂಗ್ಟನ್: ಅಮೆರಿಕದ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆಯುವ ಮುನ್ನ ಆಯಾ ವಿ.ವಿ ಗಳ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ನಡೆಸಿ ಮುಂದುವರಿಯಿರಿ ಎಂದು ಇಲ್ಲಿರುವ ಭಾರತದ ರಾಯಭಾರಿ ಕಚೇರಿಯು ಭಾರತದ ವಿದ್ಯಾರ್ಥಿಗಳಿಗೆ ಸಲಹೆ ನೀಡಿದೆ.
ನಕಲಿ ವಿ.ವಿಗಳಲ್ಲಿ ಪ್ರವೇಶ ಪಡೆದ ಭಾರತದ 100ಕ್ಕೂ ಅಧಿಕ ವಿದ್ಯಾರ್ಥಿಗಳು ತೊಂದರೆ ಅನುಭವಿಸಿದ ಹಿನ್ನೆಲೆಯಲ್ಲಿ ರಾಯಭಾರಿ ಕಚೇರಿ ಈ ಸಲಹೆ ನೀಡಿದೆ.
ನೀವು ಪ್ರವೇಶ ಪಡೆಯಲಿರುವ ವಿ.ವಿ ಕ್ಯಾಂಪಸ್ ಹೊಂದಿದೆಯೇ ಅಥವಾ ಕೇವಲ ವೆಬ್‌ಸೈಟ್ ನಿರ್ವಹಣೆ ಹಾಗೂ ಆಡಳಿತ ಕಚೇರಿಯನ್ನು ಮಾತ್ರ ಹೊಂದಿದೆಯೇ ಎಂಬುದನ್ನು ಪರಿಶೀಲಿಸಬೇಕು ಎಂಬ ಸೂಚನೆಯನ್ನೂ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.