ADVERTISEMENT

ಬಾಂಗ್ಲಾ: ಭಾರತೀಯ ವೀಸಾ ಕೇಂದ್ರದ ಪುನರ್ ಆರಂಭ

ಪಿಟಿಐ
Published 13 ಆಗಸ್ಟ್ 2024, 15:14 IST
Last Updated 13 ಆಗಸ್ಟ್ 2024, 15:14 IST
.
.   

ಢಾಕಾ (ಪಿಟಿಐ): ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿರುವ ಭಾರತೀಯ ವೀಸಾ ಅರ್ಜಿ ಕೇಂದ್ರವು ಮಂಗಳವಾರದಿಂದ ಪುನಃ ಕಾರ್ಯಾರಂಭಸಿತು. 

ಭಾರತೀಯ ವೀಸಾ ಅರ್ಜಿ ಕೇಂದ್ರವು (ಐವಿಎಸಿ) ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ‘ಢಾಕಾದಲ್ಲಿ ಐವಿಎಸಿ ಪುನಃ ಕಾರ್ಯಾರಂಭಿಸಿದೆ. ಪಾಸ್‌ಪೋರ್ಟ್‌ ತೆಗೆದುಕೊಂಡು ಹೋಗುವುದಕ್ಕೆ ಸಂಬಂಧಿಸಿದಂತೆ ಅರ್ಜಿದಾರರಿಗೆ ಸಂದೇಶ ಕಳುಹಿಸಲಾಗುವುದು’ ಎಂದು ತಿಳಿಸಿದೆ.

ಸಂದೇಶ ಸ್ವೀಕರಿಸಿದ ನಂತರವಷ್ಟೇ ವೀಸಾ ಕೇಂದ್ರದ ಬಳಿ ಬರುವಂತೆ ಅದು ಮನವಿ ಮಾಡಿದೆ.

ADVERTISEMENT

‘ನಿಯಮಿತವಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಹೀಗಾಗಿ ಪ್ರಕ್ರಿಯೆ ಪೂರ್ಣಗೊಳ್ಳಲು ಸುದೀರ್ಘ ಸಮಯ ಬೇಕಾಗಬಹುದು, ದಯವಿಟ್ಟು ಸಹಕರಿಸಿ’ ಎಂದು ಕೋರಿದೆ.

ವಿವಾದಿತ ಉದ್ಯೋಗ ಮೀಸಲಾತಿಯನ್ನು ವಿರೋಧಿಸಿ  ಅವಾಮಿ ಲೀಗ್‌ ನೇತೃತ್ವದ ಸರ್ಕಾರದ ವಿರುದ್ಧ ವ್ಯಾಪಕ ಪ್ರತಿಭಟನೆ ಆರಂಭವಾದ ನಂತರ ಶೇಖ್‌ ಹಸೀನಾ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ಸಲ್ಲಿಸಿ ಭಾರತಕ್ಕೆ ತೆರಳಿದ್ದರು.

ದೇಶದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡ ನಂತರ ಎಲ್ಲಾ ವೀಸಾ ಕೇಂದ್ರಗಳನ್ನು ಮುಚ್ಚುವುದಾಗಿ ಐವಿಎಸಿ ಕಳೆದ ವಾರ ಘೋಷಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.