ನ್ಯೂಯಾರ್ಕ್: ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ಭಾರತ ಮೂಲದ 25 ವರ್ಷದ ಮಹಿಳೆ ನಾಪತ್ತೆಯಾಗಿದ್ದು, ಆಕೆಯನ್ನು ಪತ್ತೆ ಮಾಡಲು ಪೊಲೀಸರು, ಸಾರ್ವಜನಿಕರಿಂದ ಮಾಹಿತಿ ಕೋರಿದ್ದಾರೆ.
ಕ್ವೀನ್ಸ್ ಪ್ರದೇಶದ ಫೆರಿನ್ ಖೋಜಾ ಎಂಬ ಮಹಿಳೆ ಮಾರ್ಚ್ 1 ರಂದು ರಾತ್ರಿ 11ರ ಸುಮಾರಿಗೆ ಮನೆ ತೊರೆದಿದ್ದಾಳೆ.
ಕೊನೆಯ ಬಾರಿ ಆಕೆ ಕಂಡಾಗ ಆಲಿವ್ ಗ್ರೀನ್ ಜಾಕೆಟ್, ಹಸಿರ ಬಣ್ಣದ ಸ್ವೆಟರ್ ಮತ್ತು ನೀಲಿ ಬಣ್ಣದ ಜೀನ್ಸ್ ಧರಿಸಿದ್ದರು ಎಂದು ನ್ಯೂಯಾರ್ಕ್ ಪೊಲೀಸ್ ಇಲಾಖೆ ಮಾಹಿತಿ ಬಿಡುಗಡೆ ಮಾಡಿದೆ.
ಬೈಪೋಲಾರ್ ಡಿಸಾರ್ಡರ್ ಡಿಸಾರ್ಡರ್ ಆರೋಗ್ಯ ಸಮಸ್ಯೆಯಿಂದ ಖೋಜಾ ಬಳಲುತ್ತಿದ್ದರಯ ಎಂದು ಪೊಲಿಸರು ಬಿಡುಗಡೆ ಮಾಡಿರುವ ಮಾಹಿತಿಯಿಂದ ತಿಳಿದುಬಂದಿದೆ.
ಮಹಿಳೆಯ ಚಿತ್ರವನ್ನೂ ಬಿಡುಗಡೆ ಮಾಡಿರುವ ಪೊಲೀಸರು, 112 ಪ್ರೆಸಿಂಕ್ಟ್ ಡಿಟೆಕ್ಟಿವ್ ಪಡೆಯನ್ನು ಮಹಿಳೆ ಪತ್ತೆಗೆ ಕಾರ್ಯಾಚರಣೆಗೆ ಇಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಕುರಿತಂತೆ ನ್ಯೂಯಾರ್ಕ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಮಾಹಿತಿ ನೀಡಿರುವ ಪೊಲೀಸರು, ಆಕೆಯ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.