ಸಿಂಗಪುರ: ವಂದೇ ಭಾರತ್ ಮಿಷನ್ ಅಡಿಯಲ್ಲಿ ಕಳೆದ ವರ್ಷದ ಮೇ ತಿಂಗಳಿಂದ ಈ ವರೆಗೆ 87,055 ಭಾರತೀಯರು ಸಿಂಗಪುರದಿಂದ ತವರಿಗೆ ಮರಳಿದ್ದಾರೆ ಎಂದು ಇಲ್ಲಿನ ಭಾರತೀಯ ಹೈಕಮಿಷನ್ ತಿಳಿಸಿದೆ.
ಕೋವಿಡ್‌ನಿಂದಾಗಿ ಅಂತರರಾಷ್ಟ್ರೀಯ ವಿಮಾನಗಳ ಸಂಚಾರಕ್ಕೆ ಭಾರತ ನಿರ್ಬಂಧ ಹೇರಿತ್ತು. ಇದರಿಂದ ವಿದೇಶಗಳಲ್ಲಿ ಅತಂತ್ರರಾಗಿದ್ದ ಭಾರತೀಯರನ್ನು ಕರೆತರಲು ಕೇಂದ್ರ ಸರ್ಕಾರ ಈ ಯೋಜನೆಯನ್ನು ಮೇ 6ರಂದು ಆರಂಭಿಸಿತ್ತು.
'ಕಳೆದ ವರ್ಷ ಮೇ ನಿಂದ ಇಲ್ಲಿಯವರೆಗೆ ವಂದೇ ಭಾರತ್ ಮಿಷನ್ ಅಡಿಯಲ್ಲಿ ಸಂಚರಿಸಿದ 629 ವಿಮಾನಗಳು 87,055 ಪ್ರಯಾಣಿಕರನ್ನು ಕರೆದೊಯ್ದಿವೆ' ಎಂದು ಸಿಂಗಪುರದ ಭಾರತೀಯ ಹೈಕಮಿಷನ್ ಪ್ರಕಟಣೆಯಲ್ಲಿ ತಿಳಿಸಿದೆ.
ವಂದೇ ಭಾರತ್ ಮಿಷನ್ ಅಡಿಯಲ್ಲಿ ಪ್ರತಿದಿನ ಸರಾಸರಿ 180 ಭಾರತೀಯರು ಸ್ವದೇಶಕ್ಕೆ ಮರಳಿದ್ದಾರೆ ಎಂದು ಸಿಂಗಪುರ ಸರ್ಕಾರ ತಿಳಿಸಿದೆ ಎಂಬುದಾಗಿ ಚಾನೆಲ್ ನ್ಯೂಸ್ ಏಷ್ಯಾ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.