ನವದೆಹಲಿ: ದೆಹಲಿಯಿಂದ ದೋಹಾಗೆ ಹೊರಟಿದ್ದ ಇಂಡಿಗೋ ವಿಮಾನವೊಂದು ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಪ್ರಯಾಣಿಕರೊಬ್ಬರು ಅಸ್ವಸ್ಥರಾದ ಕಾರಣ ವಿಮಾನ ಕರಾಚಿಯಲ್ಲಿ ಲ್ಯಾಂಡ್ ಆಗಿದೆ.
ದುರ್ದೈವವಶಾತ್ ಲ್ಯಾಂಡ್ ಆಗುವ ಹೊತ್ತಿಗೆ ಪ್ರಯಾಣಿಕ ಕೊನೆಯುಸಿರೆಳೆದಿದ್ದಾರೆ.
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಇಂಡಿಗೋ, ಪ್ರಯಾಣಿಕರೊಬ್ಬರು ಕುಸಿದು ಬಿದ್ದಿದ್ದರಿಂದ ವಿಮಾನವನ್ನು ಕರಾಚಿಗೆ ತಿರುಗಿಸಲಾಯ್ತು. ಆದರೆ ಲ್ಯಾಂಡ್ ಆಗುವ ವೇಳೆಯೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯಕೀಯ ತಂಡ ಘೋಷಣೆ ಮಾಡಿತು ಎಂದು ಹೇಳಿದೆ.
ಮೃತ ಪ್ರಯಾಣಿಕನ ದೇಹದೊಂದಿಗೆ ವಿಮಾನ ಮರಳಿ ದೆಹಲಿಗೆ ಬಂದಿದೆ. ಪ್ರಯಾಣಿಕನ ಜೀವ ಉಳಿಸುವ ಸಲುವಾಗಿ ಕರಾಚಿಯಲ್ಲಿ ತುರ್ತು ಲ್ಯಾಂಡ್ ಮಾಡಲಾಯ್ತು ಎಂದು ವಿಮಾನ ಸಂಸ್ಥೆ ಹೇಳಿದೆ.
‘ಈ ಸುದ್ದಿಯಿಂದ ನಮಗೆ ಬೇಸರವಾಗಿದೆ. ಮೃತರ ಕುಟುಂಬ ಹಾಗೂ ಸ್ನೇಹವರ್ಗದ ಜತೆ ನಮ್ಮ ಸಾಂತ್ವನ ಇದೆ. ಸದ್ಯ ಇತರ ಪ್ರಯಾಣಿಕರನ್ನು ಕಳುಹಿಸುವ ವ್ಯವಸ್ಥೆ ಮಾಡುತ್ತಿದ್ದೇವೆ. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿ ಇದ್ದೇವೆ‘ ಎಂದು ಇಂಡಿಗೋ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.