ADVERTISEMENT

ಇಂಡೋನೇಷ್ಯಾದಲ್ಲಿ ಫೈಜರ್ ತುರ್ತು ಬಳಕೆಗೆ ಅನುಮೋದನೆ

ರಾಯಿಟರ್ಸ್
Published 15 ಜುಲೈ 2021, 9:34 IST
Last Updated 15 ಜುಲೈ 2021, 9:34 IST
ಫೈಜರ್–ಬಯೊಎನ್‌ಟೆಕ್ ಲಸಿಕೆ (ಸಾಂದರ್ಭಿಕ ಚಿತ್ರ)
ಫೈಜರ್–ಬಯೊಎನ್‌ಟೆಕ್ ಲಸಿಕೆ (ಸಾಂದರ್ಭಿಕ ಚಿತ್ರ)   

ಜಕಾರ್ತಾ: ಆಗ್ನೇಯ ಏಷ್ಯಾದ ರಾಷ್ಟ್ರಗಳಲ್ಲಿ ತುರ್ತು ಬಳಕೆಗಾಗಿ ಫೈಜರ್–ಬಯೊಎನ್‌ಟೆಕ್ ಕೋವಿಡ್ -19 ಲಸಿಕೆಯನ್ನು ಇಂಡೋನೇಷ್ಯಾದ ಆಹಾರ ಮತ್ತು ಔಷಧ ನಿಯಂತ್ರಣ ಸಂಸ್ಥೆ (ಬಿಪಿಒಎಂ) ಅನುಮೋದಿಸಿದೆ.

12 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲಾಗುವುದು ಎಂದು ಫೈಜರ್ ಸಂಸ್ಥೆ ತಿಳಿಸಿರುವುದಾಗಿ ವರದಿಯಾಗಿದೆ.

ಸದ್ಯ ಫೈಜರ್–ಬಯೊಎನ್‌ಟೆಕ್ ಕೋವಿಡ್‌ ಲಸಿಕೆಯನ್ನು 16 ವರ್ಷ ಮೇಲ್ಪಟ್ಟವರಿಗೆ ನೀಡಲು ಅಮೆರಿಕದಲ್ಲಿ ಅನುಮತಿ ನೀಡಲಾಗಿದೆ.

ADVERTISEMENT

12–15 ವರ್ಷ ವಯಸ್ಸಿನವರಿಗೂ ಲಸಿಕೆ ನೀಡಲು ಅನುಮತಿ ಕೋರಿ ಯುರೋಪ್‌ ಒಕ್ಕೂಟದ ಔಷಧ ನಿಯಂತ್ರಕರಿಗೂ ಕಂಪನಿಯು ಈಚೆಗೆ ಮನವಿ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.