ಜಕಾರ್ತಾ: ಇಂಡೊನೇಷ್ಯಾದದ ಸುಲವೇಸಿ ದ್ವೀಪದಲ್ಲಿರುವ ಅನಧಿಕೃತ ಚಿನ್ನದ ಗಣಿ ಪ್ರದೇಶದಲ್ಲಿ ಸಂಭವಿಸಿದ್ದ ಭೂಕುಸಿತದಿಂದಾಗಿ ಅವಶೇಷಗಳಡಿ ಸಿಲುಕಿರುವ 12 ಜನರ ರಕ್ಷಣೆಗಾಗಿ ರಕ್ಷಣಾ ಸಿಬ್ಬಂದಿ ತೀವ್ರ ಶೋಧ ಕಾರ್ಯ ನಡೆಸಿದ್ದಾರೆ.
ಭೂಕುಸಿತದಿಂದಾಗಿ ಕನಿಷ್ಠ 23 ಜನರು ಮೃತಪಟ್ಟಿದ್ದಾರೆ. ಬೆಟ್ಟ ಪ್ರದೇಶವಾಗಿರುವ ಬೋನ್ ಬೊಲಾಂಗೊ ಗ್ರಾಮ ವ್ಯಾಪ್ತಿಯಲ್ಲಿ ಭಾನುವಾರ ಸಂಜೆ 100ಕ್ಕೂ ಹೆಚ್ಚು ಜನರು ಗಣಿಗಾರಿಕೆಯಲ್ಲಿ ತೊಡಗಿದ್ದರು. ಆಗ ಭೂಕುಸಿತ ಉಂಟಾಗಿದ್ದು, ಹಲವರು ಸಿಲುಕಿದ್ದರು.
ಮಂಗಳವಾರ ಹಲವು ಶವಗಳನ್ನು ಹೊರತೆಗೆಯಲಾಯಿತು. ಭೂಕುಸಿತದ ಸಂದರ್ಭದಲ್ಲಿ ಮಣ್ಣಿನಡಿ ಸಿಲುಕುವುದರಿಂದ 66 ಗ್ರಾಮಸ್ಥರು ಪಾರಾಗಿದ್ದರು. 23 ಜನರನ್ನು ಗ್ರಾಮಸ್ಥರೇ ಪಾರು ಮಾಡಿದ್ದರು. ಮೃತಪಟ್ಟಿದ್ದ 23 ಜನರ ಶವಗಳನ್ನು ತೆಗೆಯಲಾಯಿತು. ಮೃತರಲ್ಲಿ 4 ವರ್ಷದ ಬಾಲಕ, ಮೂವರು ಮಹಿಳೆಯರೂ ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.