PHOTOS | ಇಂಡೋನೇಷ್ಯಾದ ಮೌಂಟ್ ಮೆರಾಪಿ ಪರ್ವತದಲ್ಲಿ ಉಗುಳುವ ಅಗ್ನಿಜ್ವಾಲೆ
ಇಂಡೋನೇಷ್ಯಾದ ಅತ್ಯಂತ ಸಕ್ರಿಯ ಜ್ವಾಲಾಮುಖಿ, ಮೌಂಟ್ ಮೆರಾಪಿ ಪರ್ವತದ ಕುಳಿಯಿಂದ ಲಾವಾ ಕೆಳಕ್ಕೆ ಹರಿಯುತ್ತಿದೆ. ಪರಿಣಾಮ ಆಕಾಶದಲ್ಲಿ ದಟ್ಟವಾದ ಹೊಗೆ ಹರಡಿದೆ. ಜ್ವಾಲಾಮುಖಿ ಸ್ಫೋಟ ಸಂಭವಿಸಿರುವುದರಿಂದ ಅಧಿಕಾರಿಗಳು ಎಚ್ಚರಿಕೆಯನ್ನು ರವಾನಿಸಿದ್ದಾರೆ. (ಚಿತ್ರ ಕೃಪೆ: ಎಎಫ್‌ಪಿ)
ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2021, 5:57 IST
Last Updated 5 ಮಾರ್ಚ್ 2021, 5:57 IST
17,000ಕ್ಕೂ ಹೆಚ್ಚು ದ್ವೀಪ ಸಮೂಹಗಳನ್ನು ಹೊಂದಿರುವ ಇಂಡೋನೇಷ್ಯಾದಲ್ಲಿರುವ 130ರಷ್ಟು ಸಕ್ರಿಯ ಜ್ವಾಲಾಮುಖಿಗಳನ್ನು ಹೊಂದಿದೆ.
ಆಗಾಗ ಭೂಕಂಪ ಸಂಭವಿಸುತ್ತಿರುವ ಪೆಸಿಫಿಕ್ ಸಾಗರದ ಭೂಕಂಪ ವಲಯದಲ್ಲಿ (ರಿಂಗ್ ಆಫ್ ಫೈರ್) ಇದು ಸ್ಥಿತಗೊಂಡಿದೆ.
ಮೌಂಟ್ ಮೆರಾಪಿ ಇಂಡೋನೇಷ್ಯಾದ ಜಾವಾ ದ್ವೀಪದಲ್ಲಿರುವ ವಿಶ್ವದ ಅತ್ಯಂತ ಸಕ್ರಿಯ ಜ್ವಾಲಾಮುಖಿಗಳಲ್ಲಿ ಒಂದಾಗಿದೆ.
ಅಗ್ನಿಜ್ವಾಲೆ ಉಂಟಾಗಿರುವ ಹಿನ್ನೆಲೆಯಲ್ಲಿ ಹತ್ತಿರ ಪ್ರದೇಶದ ಜನರಿಗೆ ಎಚ್ಚರಿಕೆಯನ್ನು ರವಾನಿಸಲಾಗಿದೆ.
ಮೌಂಟ್ ಮೆರಾಪಿ ಪರ್ವತ ಜ್ವಾಲಾಮುಖಿ ಸ್ಫೋಟದ ಮಗದೊಂದು ರೋಚಕ ದೃಶ್ಯ.