ADVERTISEMENT

ಇಂಡೊನೇಷ್ಯಾ | ಜ್ವಾಲಾಮುಖಿ ಸ್ಫೋಟ: ಸಾವಿರಾರು ಜನರ ಸ್ಥಳಾಂತರ

ಏಜೆನ್ಸೀಸ್
Published 21 ಜನವರಿ 2024, 14:05 IST
Last Updated 21 ಜನವರಿ 2024, 14:05 IST
   

ಯೋಗ್ಯಕಾರ್ತ (ಇಂಡೊನೇಷ್ಯಾ): ಇಂಡೊನೇಷ್ಯಾದಾದ್ಯಂತ ಭಾನುವಾರ ಜ್ವಾಲಾಮುಖಿಗಳು ಸ್ಫೋಟಗೊಂಡ ಪರಿಣಾಮ ಮೌಂಟ್ ಮೆರಪಿಯಲ್ಲಿ ಅನಿಲದ ದಟ್ಟ ಹೊಗೆ ಆವರಿಸಿದೆ ಮತ್ತು ಲಾವಾ ಹೊರಸೂಸಿದೆ. ಹೀಗಾಗಿ ಸಾವಿರಾರು ಜನರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ.

ಮೆರಪಿಯಲ್ಲಿ ಲಾವಾರಸ 1 ಕಿ.ಮೀ ವರೆಗೂ ಹರಿಯುತ್ತಿದೆ ಎಂದು ಇಂಡೊನೇಷ್ಯಾ ಭೂವೈಜ್ಞಾನಿಕ ವಿಪತ್ತು ತಂತ್ರಜ್ಞಾನ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದ ಮುಖ್ಯಸ್ಥ ಅಗಸ್‌ ಬುಡಿ ಸ್ಯಾಂಟೊಸೊ ತಿಳಿಸಿದ್ದಾರೆ.

ಬಿಸಿ ಬೂದಿಯು ಹಲವು ಗ್ರಾಮಗಳ ಮೇಲೆ ಬೀಳುತ್ತಿದ್ದು, ಇದರಿಂದ ಯಾವುದೇ ಹಾನಿಯಾಗಿಲ್ಲ. ಮುಂಜಾಗ್ರತಾ ಕ್ರಮವಾಗಿ ಅಗ್ನಿಪರ್ವತದಿಂದ 7 ಕಿ.ಮೀ ದೂರ ತೆರಳುವಂತೆ ಪರ್ವತದ ಕೆಳಗೆ ವಾಸಿಸುತ್ತಿದ್ದ ನಿವಾಸಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.